ವಿಜಯಸಾಕ್ಷಿ ಸುದ್ದಿ, ಗದಗ : ಬೆಂಗಳೂರಿನ ಸಾಯಿ ಶೂಟಿಂಗ್ ರೇಂಜ್‌ನಲ್ಲಿ ನಡೆದ ರಾಜ್ಯಮಟ್ಟದ 12ನೇ ಶೂಟಿಂಗ್ ಸ್ಪರ್ಧೆಯ 10 ಮೀಟರ್ ಏರ್ ಪಿಸ್ಟಲ್ ವಿಭಾಗದಲ್ಲಿ ಗದಗ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯ ಶೂಟರ್ ಸಿದ್ಧಾರ್ಥ ಎಂ.ಬಡ್ನಿ ಸಬ್ ಯುಥ್ ವಿಭಾಗದಲ್ಲಿ ಬಂಗಾರದ ಪದಕ, ಯುಥ್ ವಿಭಾಗದಲ್ಲಿ ಬಂಗಾರದ ಪದಕ, ಜೂನಿಯರ್ ವಿಭಾಗದಲ್ಲಿ ಬಂಗಾರದ ಪದಕ ಹಾಗೂ ಸೀನಿಯರ್ ವಿಭಾಗದಲ್ಲಿ ಬೆಳ್ಳಿಯ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
Advertisement
ಸಿದ್ಧಾರ್ಥನ ಅತ್ಯುತ್ತಮ ಸಾಧನೆಗೆ ಅಧ್ಯಕ್ಷರಾದ ಮುರಘರಾಜೇಂದ್ರ ಬಡ್ನಿ, ವಿಜಯಕುಮಾರ ಗಡ್ಡಿ, ತರಬೇತುದಾರರಾದ ಬಸವರಾಜ ಹೊಂಬಾಳಿ, ಗಣೇಶ ಕಬಾಡಿ, ಸತೀಶ ಚಿಕ್ಕನಗೌಡರ, ವರಲಕ್ಷ್ಮಿ ಹೊಂಬಾಳಿ, ಅಕಾಡೆಮಿಯ ಪಾಲಕರು ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.