ಬೆಂಗಳೂರು: ಚಿನ್ನ ಖರೀದಿ ಮಾಡೋರಿಗೆ ಆಘಾತದ ಮೇಲೆ ಆಘಾತ ಆಗುತ್ತಿದೆ. ದಿನದಿಂದ ದಿನಕ್ಕೆ ಬಂಗಾರದ ಬೆಲೆಯಲ್ಲಿ ಏರಿಕೆ ಆಗುತ್ತಿದ್ದು, ಮಹಿಳೆಯರಿಗೆ ಚಿನ್ನ ಖರೀದಿ ಕನಸಾಗಿಯೇ ಉಳಿಯುತ್ತದೆ. ಬೆಳ್ಳಿ, ಬಂಗಾರಕ್ಕೆ ಭಾರತದಲ್ಲಿ ಯಾವತ್ತೂ ಡಿಮ್ಯಾಂಡ್ ಕಮ್ಮಿ ಆಗೋದೇಯಿಲ್ಲ. ಹಬ್ಬ, ಮದುವೆ ಇವುಗಳು ನೆಪವಷ್ಟೇ, ಇಲ್ಲಿ ಯಾವಾಗಲೂ ಬಂಗಾರದ ಖರೀದಿ ನಡೆಯುತ್ತಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಬಂಗಾರದ ರೇಟ್ ಯಾರೂ ಊಹಿಸದಷ್ಟು ಗಗನಕ್ಕೇರಿದೆ.
8,225 ರೂವರೆಗೂ ಕುಸಿದಿದ್ದ ಆಭರಣ ಚಿನ್ನದ ಬೆಲೆ ಈಗ 8,770 ರೂಗೆ ಏರಿದೆ. ಬೆಂಗಳೂರಿನಲ್ಲಿ ಮಾರ್ಚ್ ಮೂರನೇ ವಾರದಲ್ಲಿ ದಾಖಲೆಯ 105 ರೂವರೆಗೆ ಹೋಗಿದ್ದ ಬೆಳ್ಳಿ ಬೆಲೆ 94 ರೂಗೂ ಇಳಿದಿತ್ತು. ಈಗ ಮತ್ತೆ 100 ರೂ ಗಡಿ ಮುಟ್ಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 87,700 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 95,670 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 87,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,000 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 13ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,700 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,670 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,760 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,700 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,670 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 87,700 ರೂ
- ಚೆನ್ನೈ: 87,700 ರೂ
- ಮುಂಬೈ: 87,700 ರೂ
- ದೆಹಲಿ: 87,850 ರೂ
- ಕೋಲ್ಕತಾ: 87,700 ರೂ
- ಕೇರಳ: 87,700 ರೂ
- ಅಹ್ಮದಾಬಾದ್: 87,750 ರೂ
- ಜೈಪುರ್: 87,850 ರೂ
- ಲಕ್ನೋ: 87,850 ರೂ
- ಭುವನೇಶ್ವರ್: 87,700 ರೂ