ಚಿನ್ನದ ಬೆಲೆಯ ಸತತ ಏರಿಕೆ ಮುಂದುವರಿದಿದೆ. ಮೊನ್ನೆ 285 ರೂ ಹಾಗೂ ನಿನ್ನೆ 190 ರೂ ಏರಿಕೆಯಾದ ಚಿನ್ನದ ದರ, ಇಂದು ಮತ್ತಷ್ಟು 40 ರೂ ಹೆಚ್ಚಾಗಿದೆ. ಇನ್ನೊಂದೆಡೆ, ಬೆಳ್ಳಿ ದರದಲ್ಲಿ ಏರಿಕೆಯ ಓಟ ತಗ್ಗಿದ್ದು, ಮಂಗಳವಾರ 10ರಿಂದ 15 ರೂವರೆಗೆ ಇಳಿಕೆಯಾಗಿದೆ. ನಿನ್ನೆ ಮಾತ್ರ ಬೆಳ್ಳಿ ದರ 25 ರೂ ಏರಿಕೆಯಾಗಿತ್ತು.
ದೇಶಾದ್ಯಂತ ಚಿನ್ನ-ಬೆಳ್ಳಿ ದರ (ಫೆಬ್ರವರಿ 24)
- 24 ಕ್ಯಾರಟ್ (1 ಗ್ರಾಂ) ಚಿನ್ನ: ₹16,178
- 22 ಕ್ಯಾರಟ್ (1 ಗ್ರಾಂ) ಚಿನ್ನ: ₹14,830
- 18 ಕ್ಯಾರಟ್ (1 ಗ್ರಾಂ) ಚಿನ್ನ: ₹12,134
- ಬೆಳ್ಳಿ (1 ಗ್ರಾಂ): ₹285
ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,48,300 ಆಗಿದ್ದು, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,61,780 ತಲುಪಿದೆ. 100 ಗ್ರಾಂ ಬೆಳ್ಳಿ ದರ ₹28,500 ಆಗಿದೆ.
ಬೆಂಗಳೂರು ದರ
ಬೆಂಗಳೂರುನಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,48,300 ಆಗಿದ್ದು, ಬೆಳ್ಳಿ (100 ಗ್ರಾಂ) ದರ ₹28,500 ಇದೆ.
ಇತರೆ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಂ)
- ಚೆನ್ನೈ: ₹14,890
- ಮುಂಬೈ: ₹14,830
- ದೆಹಲಿ: ₹14,845
- ಕೋಲ್ಕತಾ: ₹14,830
- ಕೇರಳ: ₹14,830
- ಅಹ್ಮದಾಬಾದ್: ₹14,835
- ಜೈಪುರ್: ₹14,845
- ಲಕ್ನೋ: ₹14,845
- ಭುವನೇಶ್ವರ್: ₹14,830
ತಮಿಳುನಾಡು ಹಾಗೂ ಕೇರಳ ಸೇರಿದಂತೆ ಕೆಲವು ಭಾಗಗಳಲ್ಲಿ ಬೆಳ್ಳಿ ದರ ₹29,000ರವರೆಗೆ ತಲುಪಿದೆ. ಚಿನ್ನದ ಬೆಲೆ ಮುಂದಿನ ದಿನಗಳಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರ ವಲಯ ಅಂದಾಜಿಸಿದೆ.



