ದಿಢೀರ್ ಗಗನಕ್ಕೇರಿದ ಚಿನ್ನದ ಬೆಲೆ: ಪ್ರತಿ ಗ್ರಾಂಗೆ 8,800 ರೂ..! ಬೆಂಗಳೂರಿನಲ್ಲಿ ಎಷ್ಟಿದೆ ಗೊತ್ತಾ..?

0
Spread the love

ಹುಟ್ಟುವ ಕೂಸಿನಿಂದ ಹಿಡಿದು ವಿವಾಹಿತೆಯಾಗುವ ಕನ್ಯೆಯವರೆಗೆ ಪ್ರತಿಯೊಂದು ಶಾಸ್ತ್ರಕ್ಕೂ ಬಂಗಾರ, ಬೆಳ್ಳಿ ಬೇಕೇ ಬೇಕು. ಹಬ್ಬಗಳ ಸಮಯದಲ್ಲಿ ಕೂಡ ಬಂಗಾರ, ಬೆಳ್ಳಿಗೆ ಮಹತ್ವ ಇದ್ದೇ ಇದೆ. ಕೆಲವರು ಚಿನ್ನದ ಖರೀದಿಗೆ ಹಬ್ಬಗಳ ಬರುವಿಕೆಯನ್ನು ಎದುರು ನೋಡುತ್ತಿರುತ್ತಾರೆ. ಹೀಗಾಗಿ ಇಂದು ಚಿನ್ನ ಬೆಳ್ಳಿಯ ದರ ಹೇಗಿದೆ ಅನ್ನೋದರ ವಿವರ ಇಲ್ಲಿದೆ.

Advertisement

ಸೋಮವಾರದಿಂದ ಸತತ ನಾಲ್ಕನೇ ದಿನ ಈ ಸ್ವರ್ಣ ದುಬಾರಿಯಾಗಿದೆ. ಅಪರಂಜಿ ಚಿನ್ನದ ಬೆಲೆ ಭಾರತದಲ್ಲಿ 8,800 ರೂ ಮೈಲಿಗಲ್ಲು ಮುಟ್ಟಿ ಹೊಸ ದಾಖಲೆ ಬರೆದಿದೆ. 18 ಕ್ಯಾರಟ್ ಚಿನ್ನದ ಬೆಲೆಯೂ 6,600 ರೂ ಗಡಿ ಮುಟ್ಟಿ ದಾಖಲೆ ಮಾಡಿದೆ. ಇತ್ತ ಚಿನ್ನದ ಬೆಲೆ ಏರಿಕೆ ಆಗುತ್ತಿದ್ದರೂ ಬೆಳ್ಳಿ ಸ್ತಬ್ಧತೆ ಮುಂದುವರಿದಿದೆ. ಇಂದೂ ಕೂಡ ಬೆಳ್ಳಿ ಬೆಲೆಯ ವ್ಯತ್ಯಯವಾಗಿಲ್ಲ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 80,700 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 88,040 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,050 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 80,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,050 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 20ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 80,700 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 88,040 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,030 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,005 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 80,700 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 88,040 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,005 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 80,700 ರೂ
  • ಚೆನ್ನೈ: 80,700 ರೂ
  • ಮುಂಬೈ: 80,700 ರೂ
  • ದೆಹಲಿ: 80,850 ರೂ
  • ಕೋಲ್ಕತಾ: 80,700 ರೂ
  • ಕೇರಳ: 80,700 ರೂ
  • ಅಹ್ಮದಾಬಾದ್: 80,750 ರೂ
  • ಜೈಪುರ್: 80,850 ರೂ
  • ಲಕ್ನೋ: 80,850 ರೂ
  • ಭುವನೇಶ್ವರ್: 80,700 ರೂ

Spread the love

LEAVE A REPLY

Please enter your comment!
Please enter your name here