Gold Price Today: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌: ಚಿನ್ನದ ಬೆಲೆ ಮತ್ತೆ ಇಳಿಕೆ

0
Spread the love

ಮದುವೆ ಸೀಸನ್‌ ಬಂದಿದ್ದೇ ಬಂದಿದ್ದು ಬೆಳ್ಳಿ, ಬಂಗಾರ ಎರಡರ ದರವೂ ಹೆಚ್ಚಾಗಿ, ಗ್ರಾಹಕರ ಕೈ ಸುಡುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆ ಇಂದು ಸ್ವಲ್ಪ ಇಳಿಕೆ ಕಂಡಿದೆ. ಬೆಲೆ ಏರಿದೆ ಅಂತಾ ಚಿನ್ನ ಖರೀದಿ ಮಾಡೋರ ಸಂಖ್ಯೆಯಲ್ಲೇನು ಇಳಿಕೆ ಆಗಿಲ್ಲ,

Advertisement

ಚಿನ್ನ ಏರಲಿ, ಇಳಿಯಲಿ ಇದರ ಖರೀದಿ ಮಾತ್ರ ಜೋರಾಗಿರುತ್ತದೆ. ಇದಕ್ಕೆ ಕಾರಣ ಬಂಗಾರಕ್ಕಿರುವ ಮೌಲ್ಯ. ಚಿನ್ನದೊಡವೆ ಎಂಬುದು ಅಂದವನ್ನು ವೃದ್ಧಿಸುವುದರೊಂದಿಗೆ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಒಡವೆ ಎಂದರೆ ಎಲ್ಲರ ಕಣ್ಣು ಕೋರೈಸುತ್ತದೆ.

22 ಕ್ಯಾರಟ್ ಆಭರಣ ಚಿನ್ನದ ಬೆಲೆ 8,065 ರೂ ಇದ್ದದ್ದು 8,020 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 8,798 ರೂ ಇದ್ದದ್ದು 49 ರೂ ಕಡಿಮೆ ಆಗಿದೆ. 18 ಕ್ಯಾರಟ್ ಚಿನ್ನದ ಬೆಲೆ 6,562 ರೂಗೆ ಇಳಿದಿದೆ. ಬೆಳ್ಳಿ ಬೆಲೆಯಲ್ಲಿ ಇಂದೂ ಕೂಡ ವ್ಯತ್ಯಯವಾಗಿಲ್ಲ.

ಬೆಂಗಳೂರಿನಲ್ಲಿ ಗ್ರಾಮ್​ಗೆ 10 ಪೈಸೆಯಷ್ಟು ಮಾತ್ರ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 80,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 87,490 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 80,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,800 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 06ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 80,200 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 87,490 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 65,620 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 80,200 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 87,490 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 80,200 ರೂ
  • ಚೆನ್ನೈ: 80,200 ರೂ
  • ಮುಂಬೈ: 80,200 ರೂ
  • ದೆಹಲಿ: 80,350 ರೂ
  • ಕೋಲ್ಕತಾ: 80,200 ರೂ
  • ಕೇರಳ: 80,200 ರೂ
  • ಅಹ್ಮದಾಬಾದ್: 80,250 ರೂ
  • ಜೈಪುರ್: 80,350 ರೂ
  • ಲಕ್ನೋ: 80,350 ರೂ
  • ಭುವನೇಶ್ವರ್: 80,200 ರೂ

 


Spread the love

LEAVE A REPLY

Please enter your comment!
Please enter your name here