ಚಿನ್ನ ಮಾಡಿಸಿಕೊಳ್ಳಬೇಕು ಎಂದಾದರೆ ಬೆಲೆ ಇಳಿಕೆಯಾಗುವುದು ಮುಖ್ಯವಾಗಿದೆ. ಆದರೂ ಒಮ್ಮೊಮ್ಮೆ ಪರಿಸ್ಥಿತಿಗೆ ಕಟ್ಟುಬಿದ್ದು ಬೆಲೆ ಏರಿಕೆಯ ಸಮಯದಲ್ಲೇ ಸಾಕಷ್ಟು ಗ್ರಾಹಕರು ಚಿನ್ನ ಖರೀದಿಸುತ್ತಾರೆ. ಬೆಲೆ ತಗ್ಗಿದರೆ ನಮಗೊಂದಿಷ್ಟು ಲಾಭವಿತ್ತೆಂದು ಸಾಕಷ್ಟು ಜನ ಈ ಸಮಯದಲ್ಲಿ ಭಾವಿಸುತ್ತಾರೆ.
ಚಿನ್ನದ ಮಾರುಕಟ್ಟೆಯೇ ಹಾಗೆ ಬೆಲೆ ಯಾವಾಗ ಏರುತ್ತದೆ? ಯಾವಾಗ ಇಳಿಯುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಚಿನ್ನ ಖರೀದಿಗೂ ಮುನ್ನ ಇಂದಿನ ರೇಟ್ ಹೇಗಿದೆ ಎಂಬುದನ್ನು ತಿಳ್ಕೊಳ್ಳೋಣ ದೇಶೀಯ ಮಾರುಕಟ್ಟೆಯಲ್ಲಿ ಶನಿವಾರ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 11,940 ರೂಪಾಯಿ ಆಗಿದ್ದು,
ಇಂದು ಬರೋಬ್ಬರಿ 87 ರೂಪಾಯಿ ಹೆಚ್ಚಳ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ 80 ರೂಪಾಯಿ ಏರಿಕೆ ಆಗಿದ್ದು, 10,945 ರುಪಾಯಿ ಆಗಿದೆ.24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯು 870 ರೂಪಾಯಿ ಹೆಚ್ಚಳ ಆಗಿ, 1,19,400 ರುಪಾಯಿ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 800 ರೂ ಹೆಚ್ಚಳ ಆಗಿ, 1,09,450 ರೂಪಾಯಿಗೆ ಏರಿಕೆ ಆಗಿದೆ.
ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 11,940 ರೂ ಇದೆ. ಬೆಳ್ಳಿಯ ಬೆಲೆ ಕೂಡಾ ಬರೋಬ್ಬರಿ 3 ರೂಪಾಯಿ ಏರಿಕೆ ಆಗಿದ್ದು, ಕೆಜಿ ಬೆಲೆಯಲ್ಲಿ 3 ಸಾವಿರ ಹೆಚ್ಚಳ ಆಗಿದೆ. ಹೀಗಾಗಿ ಕೆಜಿ ಬೆಲೆ 1,55,000 ರೂ ಆಗಿದೆ.