ಬೆಂಗಳೂರು: ಆರ್ಥಿಕ ಅಸ್ಥಿರತೆ, ಸಾಮಾಜಿಕ ಅಶಾಂತಿ ಅಥವಾ ಯಾವುದೇ ರೀತಿಯ ಆರ್ಥಿಕ ಅನಿಶ್ಚಿತತೆ ಉಂಟಾದಾಗ, ಅಂತಹ ಸಮಯದಲ್ಲಿ ಚಿನ್ನದ ಬೆಲೆ ಸಾಮಾನ್ಯವಾಗಿ ಏರುತ್ತದೆ. ಇಷ್ಟೇ ಅಲ್ಲ ದಿನವೂ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿಯ ದರ ಬದಲಾಗುತ್ತಿರುತ್ತದೆ. ಹಾಗಿದ್ರೆ ಇಂದು ಮಾರುಕಟ್ಟೆಯಲ್ಲಿ ಎಷ್ಟಿದೆ ಚಿನ್ನದ ಬೆಲೆ ನೋಡೋಣ.
ದೇಶೀಯ ಮಾರುಕಟ್ಟೆಯಲ್ಲಿ ಫೆಬ್ರವರಿ 14 ರಂದು ರಂದು 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆಯಲ್ಲಿ 10 ರೂಪಾಯಿ ಏರಿಕೆ ಆಗಿದೆ. ಹೀಗಾಗಿ ಇಂದಿನ ಬೆಲೆ 1 ಗ್ರಾಂ ಗೆ 7,990 ರೂ ಇದೆ. 24 ಕ್ಯಾರೆಟ್ ಚಿನ್ನ ಕೂಡಾ ದರ 11 ರೂ ಏರಿಕೆ ಆಗಿದ್ದು, 1 ಗ್ರಾಂ ಚಿನ್ನದ ಬೆಲೆ 8716 ರುಪಾಯಿ ಆಗಿದೆ.
10 ಗ್ರಾಂ ಚಿನ್ನದ ಬೆಲೆ ಎಷ್ಟು?
22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 79,900 ರೂ ಇದ್ದು, 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 87160 ರೂ ಆಗಿದೆ. ಗುರುವಾರದಿಂದ ಶುಕ್ರವಾರಕ್ಕೆ ಚಿನ್ನದ ದರದಲ್ಲಿ 100 ರೂ ಏರಿಕೆ ಆಗಿದ್ದು, ಶುದ್ದ ಚಿನ್ನದ ಬೆಲೆ 110 ರೂ ಏರಿಕೆ ಆಗಿದೆ.
ಬೆಂಗಳೂರಿನ ಚಿನ್ನದ ಬೆಲೆ
ಬೆಂಗಳೂರಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 7,990 ರೂ ಇದೆ. 24 ಕ್ಯಾರೆಟ್ ಚಿನ್ನದ ಬೆಲೆ 8,716 ರೂ ಇದೆ. ಬೆಳ್ಳಿಯ ಬೆಲೆಯಲ್ಲಿ ಕೊಂಚ ಇಳಿಕೆ ಆಗಿದ್ದು 10 ಪೈಸೆ ಇಳಿದು 99.40 ಪೈಸೆ ಆಗಿದೆ. ಕೆಜಿ ಬೆಳ್ಳಿಯ ಬೆಲೆ 99,400 ರೂ ಇದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 87,160 ರೂ
- ಚೆನ್ನೈ: 79,800 ರೂ
- ಮುಂಬೈ: 79,800 ರೂ
- ದೆಹಲಿ: 79,950 ರೂ
- ಕೋಲ್ಕತಾ: 79,800 ರೂ
- ಕೇರಳ: 79,800 ರೂ
- ಅಹ್ಮದಾಬಾದ್: 79,850 ರೂ
- ಜೈಪುರ್: 79,950 ರೂ
- ಲಕ್ನೋ: 79,950 ರೂ
- ಭುವನೇಶ್ವರ್: 79,800 ರೂ