HomeKarnataka NewsGold Rate Today: ಗಗನಕ್ಕೇರುತ್ತಿದೆ ಬಂಗಾರದ ಬೆಲೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್

Gold Rate Today: ಗಗನಕ್ಕೇರುತ್ತಿದೆ ಬಂಗಾರದ ಬೆಲೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್

For Dai;y Updates Join Our whatsapp Group

Spread the love

ಇತ್ತೀಚಿನ ಕೆಲ ದಿನಗಳ ಏರಿಕೆ ನೋಡಿ, ಎಲ್ಲರ ಬಾಯಲ್ಲೂ ಗೋಲ್ಡ್‌ ರೇಟ್‌ನದ್ದೇ ಮಾತಾಗಿದೆ. ಏನಪ್ಪಾ, ಹೀಗೆ ದಿನ ದಿನ ಏರಿಕೆಯಾಗ್ತಿದೆ, ಮದುವೆ, ಹಬ್ಬಗಳಿಗೆ ಖರೀದಿ ಮಾಡೋದು ಹೇಗೆ ಅನ್ನೋ ಚಿಂತೆ ಕೂಡ ಕಾಡ್ತಿದೆ.

ಬಂಗಾರದ ಮೇಲೆ ಹೂಡಿಕೆ ಮಾಡಿದವರಿಗೆ, ಗೋಲ್ಡ್‌ ಚೀಟಿಯಂತಹ ಸ್ಕೀಮ್‌ಗಳಲ್ಲಿ ಪಾವತಿಸುವವರಿಗೆ ಲಾಟರಿಯಾಗಲಿದೆ. ಸುಮಾರು ವರ್ಷಗಳ ಹಿಂದೆ ಖರೀದಿಸಿದ ಬಂಗಾರವನ್ನು ಮಾರಾಟ ಮಾಡಲು ಬಯಸುತ್ತಿರುವವರಿಗೂ ಕೂಡ ಒಳ್ಳೆ ಹಣ ಸಿಗಲಿದೆ. ಎರಡು ವಾರದಿಂದಲೂ ಬೆಳ್ಳಿ-ಬಂಗಾರದ ನಾಗಲೋಟ ಜೋರಾಗಿದೆ.

ಇತ್ತ ಬೆಳ್ಳಿ ಒಂದು ಕೆಜಿಗೆ ಒಂದು ಲಕ್ಷಕ್ಕೂ ಹೆಚ್ಚಾಗಿದೆ. ಮೊದಲು ಬೆಳ್ಳಿ ದರ ಕಡಿಮೆ ಇತ್ತು ಆದರೆ ಈಗ ಅದು ಕೂಡ ದುಬಾರಿಯಾಗಿದೆ. ಇಂದು ಸಹ ಚಿನ್ನದ ಬೆಲೆ ಏರಿಕೆ ಕಂಡಿದೆ. ಎಷ್ಟಿದೆ ಇಂದಿನ ಗೋಲ್ಡ್‌ ರೇಟ್‌ ಅನ್ನೋ ಬಗ್ಗೆ ಇಲ್ಲಿದೆ ವಿವರ ನೋಡಿ.

ದೇಶೀಯ ಮಾರುಕಟ್ಟೆಯಲ್ಲಿ ಫೆಬ್ರವರಿ 24 ರಂದು ರಂದು 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆಯಲ್ಲಿ 10 ರೂಪಾಯಿ ಏರಿಕೆ ಆಗಿದೆ. ಹೀಗಾಗಿ ಇಂದಿನ ಬೆಲೆ 1 ಗ್ರಾಂ ಗೆ 8,055 ರೂ ಇದೆ. 24 ಕ್ಯಾರೆಟ್ ಚಿನ್ನ ಕೂಡಾ ದರ 10 ರೂ ಏರಿಕೆ ಆಗಿದ್ದು, 1 ಗ್ರಾಂ ಚಿನ್ನದ ಬೆಲೆ 8,787 ರುಪಾಯಿ ಆಗಿದೆ.

10 ಗ್ರಾಂ ಬೆಲೆ ಎಷ್ಟು?

22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 80,550 ರೂ ಇದ್ದು, 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 87,870 ರೂ ಆಗಿದೆ. ಭಾನುವಾರದಿಂದ ಸೋಮವಾರಕ್ಕೆ ಚಿನ್ನದ ದರದಲ್ಲಿ 100 ರೂ ಏರಿಕೆ ಆಗಿದ್ದು, ಶುದ್ದ ಚಿನ್ನದ ಬೆಲೆ 100 ರೂ ಏರಿಕೆ ಆಗಿದೆ.

ಬೆಂಗಳೂರಿನ ಚಿನ್ನದ ಬೆಲೆ

ಬೆಂಗಳೂರಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 8,055 ರೂ ಇದೆ. ಬೆಳ್ಳಿಯ ಬೆಲೆ ಕೊಂಚ ಏರಿಕೆ ಆಗಿದೆ. ಗ್ರಾಂ ಬೆಳ್ಳಿಯ ಬೆಲೆ 50 ಪೈಸೆ ಏರಿಕೆ ಆಗಿ 101 ರೂ ಆಗಿದೆ. ಕೆಜಿ ಬೆಳ್ಳಿಯ ಬೆಲೆ 1,01,000 ರೂ ಇದೆ.

ಫೆಬ್ರವರಿ 1 ರಂದು 7,745 ರೂ ನಷ್ಟಿದ್ದ ಚಿನ್ನದ ಬೆಲೆ ಫೆಬ್ರವರಿ 24 ರಂದು 8,055 ರೂ ಆಗಿದೆ. ಫೆಬ್ರವರಿ ತಿಂಗಳಲ್ಲಿ ಮತ್ತೆ ಏರಿಕೆ ಪರ್ವ ಶುರುವಾಗಿದ್ದು,ಸಾರ್ವಕಾಲಿಕ ಗರಿಷ್ಠ ದರ ಏರಿಕೆ ಆಗಿದೆ.

ಪ್ರಮುಖ ನಗರಗಳಲ್ಲಿ ಇಂದು 1 ಗ್ರಾಂ ಚಿನ್ನದ ಬೆಲೆ ವಿವರ ಹೀಗಿದೆ

ನಗರಗಳು

 

22 ಕ್ಯಾರೆಟ್

 

24 ಕ್ಯಾರೆಟ್

 

ಬೆಂಗಳೂರು

 

8,055

 

8,787

 

ಚೆನ್ನೈ

 

8,055

 

8,787

 

ಕೇರಳ

 

8,055

 

8,787

 

ದಿಲ್ಲಿ

 

8,060

 

8,792

 

ಹೈದರಾಬಾದ್

 

8,055

 

8,787

 

ಕೋಲ್ಕತ್ತಾ

 

8,055

 

8,787

 

ಮುಂಬಯಿ

 

8,055

 

8,787

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!