ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಮತ್ತೊಮ್ಮೆ ಚಿನ್ನದ ದರ ಕುಸಿದಿದೆ.
ಭಾರತೀಯರು ಚಿನ್ನಕ್ಕೆ ಅತ್ಯುತ್ತಮ ಸ್ಥಾನ ನೀಡಿದ್ದು, ಚಿನ್ನವನ್ನ ಪೂಜ್ಯ & ಉನ್ನತ ವಸ್ತು ಅಂತಾ ನೋಡುತ್ತಾರೆ. ಆದರೆ ಇಂತಹ ಅತ್ಯುತ್ತಮ ವಸ್ತು ಚಿನ್ನದ ಬೆಲೆ ಮಾತ್ರ ದಿನದಿಂದ ದಿನಕ್ಕೆ ಆಕಾಶ ಮುಟ್ಟುತ್ತಲೇ ಇತ್ತು. ಹೀಗೆ ಚಿನ್ನದ ಬೆಲೆ ಏರಿಕೆ ಬಗ್ಗೆ ಟೆನ್ಷನ್ ತಗೊಂಡಿದ್ದ ಜನರಿಗೆ ಈ ಸಮಯದಲ್ಲಿ ಭರ್ಜರಿ ಸುದ್ದಿ ಸಿಕ್ಕಿದ್ದು, ಚಿನ್ನದ ಬೆಲೆ ಭಾರಿ ಕುಸಿತ ಕಾಣುತ್ತಿದೆ.
ಬೆಂಗಳೂರಿನಲ್ಲಿ ಇದೀಗ 24 ಕ್ಯಾರೆಟ್ ಚಿನ್ನ ಅಂದ್ರೆ ಶುದ್ಧ ಚಿನ್ನ ಅಂತಾ ಕರೆಯುವ ಅಪರಂಜಿ ಚಿನ್ನದ ಬೆಲೆ 97,260 ರೂಪಾಯಿಗೆ ಇಳಿಕೆ ಕಂಡಿದೆ. ಇದರ ಜೊತೆಗೆ ಮತ್ತೊಂದು ಖುಷಿ ಸುದ್ದಿ ಏನಂದ್ರೆ, 22 ಕ್ಯಾರೆಟ್ ಅಂದ್ರೆ ಆಭರಣ ಚಿನ್ನದ ಬೆಲೆಯಲ್ಲಿ ಕೂಡ ಭಾರಿ ಇಳಿಕೆ ಕಾಣುತ್ತಾ ಇದ್ದು, ಈಗ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 89,150 ರೂಪಾಯಿಗೆ ತಲುಪಿದೆ. ಮತ್ತೊಂದು ಕಡೆ ಬೆಳ್ಳಿ ಬೆಲೆ 10 ಗ್ರಾಂ 1,077 ರೂಪಾಯಿ ಆಗಿದ್ದು, ಮುಂದಿನ ದಿನಗಳಲ್ಲಿ ಬೆಳ್ಳಿ ಬೆಲೆ ಏರಿಕೆ ಆಗುವ ನಿರೀಕ್ಷೆ ದಟ್ಟವಾಗಿದೆ. ಈ ಕಾರಣಕ್ಕೆ ಹೂಡಿಕೆದಾರರನ್ನು ಕೂಡ ಈಗ ಬೆಳ್ಳಿ ಸಾಕಷ್ಟು ಆಕರ್ಷಣೆ ಮಾಡುತ್ತಿದೆ.