ಬೆಳ್ಳಿ, ಬಂಗಾರಕ್ಕೆ ಭಾರತದಲ್ಲಿ ಯಾವತ್ತೂ ಡಿಮ್ಯಾಂಡ್ ಕಮ್ಮಿ ಆಗೋದೇ ಇಲ್ಲ. ಇಲ್ಲಿ ಬಂಗಾರವನ್ನು ಬರೀ ಆಭರಣವಾಗಿ ನೋಡೋದಿಲ್ಲ. ಸಂಪತ್ತಾಗಿ, ಸ್ಟೇಟಸ್ ವಿಷಯವಾಗಿ, ಭಾವನಾತ್ಮಕವಾಗಿ ನೋಡಲಾಗುತ್ತದೆ. ಬಂಗಾರದ ಖರೀದಿ ಅಂದರೆ ಏನೋ ಖುಷಿ ನಮ್ಮ ಜನರಿಗೆ.
ಅದರಲ್ಲೂ ಮಹಿಳೆಯರಿಗೆ ಬಂಗಾರದ ಮೇಲಿನ ವ್ಯಾಮೋಹ ಅಷ್ಟಿಷ್ಟಲ್ಲ. ಏನೇ ದೊಡ್ಡ ಮೊತ್ತದ ಹಣ ಇದ್ದರೂ ಮೊದಲು ಯೋಚನೆಗೆ ಬರುವುದೇ ಬಂಗಾರದ ಖರೀದಿ. ಅಷ್ಟರ ಮಟ್ಟಿಗೆ ನಮ್ಮ ದೇಶದಲ್ಲಿ ಬಂಗಾರಕ್ಕೆ ಬೆಲೆಯಿದೆ..ಇಂದು ಸೋಮವಾರ ಚಿನ್ನದ ಬೆಲೆ ಗ್ರಾಮ್ಗೆ 30 ರೂನಷ್ಟು ಹೆಚ್ಚಳವಾಗಿದೆ. 8,920 ರೂ ಇದ್ದದ್ದು 8,950 ರೂಗೆ ಏರಿದೆ.
ಬೆಳ್ಳಿ ಬೆಲೆಯಲ್ಲಿ ವ್ಯತ್ಯಯ ಆಗಿಲ್ಲ. ವಿದೇಶಗಳಲ್ಲಿ ಬಹುತೇಕ ಕಡೆ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 89,500 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 97,640 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 89,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,000 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 2ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,500 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,640 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,230 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,500 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,640 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 89,500 ರೂ
- ಚೆನ್ನೈ: 89,500 ರೂ
- ಮುಂಬೈ: 89,500 ರೂ
- ದೆಹಲಿ: 89,650 ರೂ
- ಕೋಲ್ಕತಾ: 89,500 ರೂ
- ಕೇರಳ: 89,500 ರೂ
- ಅಹ್ಮದಾಬಾದ್: 89,550 ರೂ
- ಜೈಪುರ್: 89,650 ರೂ
- ಲಕ್ನೋ: 89,650 ರೂ
- ಭುವನೇಶ್ವರ್: 89,500 ರೂ