HomeKarnataka NewsTodays Gold Price: ದಿನೇ ದಿನೇ ಏರುತ್ತಿದೆ ಚಿನ್ನದ ದರ..! ಹೀಗಿದೆ ನೋಡಿ ಇಂದಿನ ಗೋಲ್ಡ್...

Todays Gold Price: ದಿನೇ ದಿನೇ ಏರುತ್ತಿದೆ ಚಿನ್ನದ ದರ..! ಹೀಗಿದೆ ನೋಡಿ ಇಂದಿನ ಗೋಲ್ಡ್ ರೇಟ್‌

For Dai;y Updates Join Our whatsapp Group

Spread the love

ಇಂದು ನೀವೂ ಬೆಳ್ಳಿ-ಬಂಗಾರ ಖರೀದಿ ಮಾಡಲು ಬಯಸಿದರೆ, ಖರೀದಿಗೆ ಹೋಗುವ ಮುನ್ನ ಇಂದಿನ ದರವನ್ನು ಮೊದಲು ಚೆಕ್‌ ಮಾಡಿಕೊಳ್ಳಿ. ಕಳೆದ ಕೆಲ ಸಮಯದಿಂದ ಚಿನ್ನದ ಬೆಲೆ ಗಗನಕ್ಕೇರಿದೆ. ಚಿನ್ನ ಕೊಳ್ಳೋದಿರಲಿ ಬೆಲೆ ಕೇಳಿದರೇನೇ ಒಂದು ಕ್ಷಣ ಎದೆ ಝಲ್‌ ಎನ್ನುತ್ತದೆ. ಹೇಗಪ್ಪಾ ಬಂಗಾರ ಖರೀದಿಸೋದು ಎನಿಸುತ್ತದೆ. ಈ ವರ್ಷ ಬಂಗಾರದ ದರ ಊಹಿಸದ ರೀತಿಯಲ್ಲಿ ಹೆಚ್ಚಾಗುತ್ತದೆ ಎಂಬ ವರದಿಗಳು ನಿಜವಾಗುತ್ತವೆ ಎಂಬ ಅನುಮಾನ ಹೆಚ್ಚಾಗುತ್ತಿದೆ.

ಇದೀಗ ನಿನ್ನೆ ಬುಧವಾರ ಗ್ರಾಮ್​​ಗೆ 10 ರೂನಷ್ಟು ಅಲ್ಪ ಹೆಚ್ಚಳವಾಗಿದ್ದ 22 ಕ್ಯಾರಟ್ ಚಿನ್ನದ ಬೆಲೆ ಇಂದು ಗುರುವಾರ 40 ರೂನಷ್ಟು ಹೆಚ್ಚಳವಾಗಿದೆ. ಅಪರಂಜಿ ಚಿನ್ನದ ಬೆಲೆ ಗ್ರಾಮ್​​ಗೆ 44 ರೂ ಏರಿಕೆ ಆಗಿದೆ. ಆಭರಣ ಚಿನ್ನದ ಬೆಲೆ ಬೆಂಗಳೂರಿನಲ್ಲಿ 8,235 ರೂ ಆದರೆ, ಅಪರಂಜಿ ಚಿನ್ನದ ಬೆಲೆ 8,984 ರೂಗೆ ಏರಿದೆ. ವಿದೇಶಗಳಲ್ಲಿ ದುಬೈನಲ್ಲಿ ಬೆಲೆ ತುಸು ಇಳಿಕೆ ಆಗಿದೆ. ಉಳಿದ ಹೆಚ್ಚಿನ ಕಡೆ ಅಲ್ಪ ಏರಿಕೆ ಆಗಿದೆ. ಬೆಳ್ಳಿ ಬೆಲೆ ಮತ್ತೆ ಸ್ಥಿರತೆ ಪಡೆದುಕೊಂಡಂತಿದೆ.

ಇವತ್ತೂ ಕೂಡ ಬೆಳ್ಳಿ ಬೆಲೆಯಲ್ಲಿ ಹೆಚ್ಚಳ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 82,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 89,840 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,200 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 82,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,200 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 27ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 82,350 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 89,840 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,380 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,020 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 82,350 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 89,840 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,020 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 82,350 ರೂ
  • ಚೆನ್ನೈ: 82,350 ರೂ
  • ಮುಂಬೈ: 82,350 ರೂ
  • ದೆಹಲಿ: 82,500 ರೂ
  • ಕೋಲ್ಕತಾ: 82,350 ರೂ
  • ಕೇರಳ: 82,350 ರೂ
  • ಅಹ್ಮದಾಬಾದ್: 82,400 ರೂ
  • ಜೈಪುರ್: 82,500 ರೂ
  • ಲಕ್ನೋ: 82,500 ರೂ
  • ಭುವನೇಶ್ವರ್: 82,350 ರೂ

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!