ಚಿನ್ನ ಕೇವಲ ಸ್ಥಿರ ಸಂಪತ್ತಾಗಿ ಉಳಿದಿಲ್ಲ, ಬದಲಾಗಿ ಕಾಲ ಉರುಳಿದಂತೆ ಹೆಚ್ಚು ಲಾಭ ನೀಡುವ ಕಮೊಡಿಟಿಯಾಗಿಯೂ ಪ್ರಸಿದ್ಧವಾಗುತ್ತಿದೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಚಿನ್ನಕ್ಕೆ ಸಾಕಷ್ಟು ಮಹತ್ವ ನೀಡಲಾಗಿದೆ. ಬಹುತೇಕ ಭಾರತೀಯ ಕುಟುಂಬಗಳು ಚಿನ್ನವನ್ನು ಹೊಂದಿವೆ ಕಾರಣ ಚಿನ್ನವನ್ನು ಸಮೃದ್ಧಿ ಹಾಗೂ ಐಶ್ವರ್ಯದ ಪ್ರತೀಕವೆಂದೂ ನಂಬಲಾಗಿದೆ.
ಹಾಗಾಗಿ, ಚಿನ್ನಕ್ಕೆ ಭಾರತದಂತಹ ದೇಶದಲ್ಲಿ ಬೇಡಿಕೆ ಇದ್ದೆ ಇರುತ್ತದೆ. ಇಲ್ಲಿ ಚಿನ್ನವನ್ನು ಸಮೃದ್ಧಿ ಹಾಗೂ ಸಂಪತ್ತಿನ ಪ್ರತೀಕವೆಂದೇ ಭಾವಿಸಲಾಗಿದೆ. ಹಾಗಾಗಿ, ಹಬ್ಬ ಹರಿದಿನ, ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳಲ್ಲಿ ಚಿನ್ನದ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತವೆ. ಸದ್ಯ ಜನವರಿ 5, 2026, ಸೋಮವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13,740 ರೂಪಾಯಿ ಇದ್ದು,
ಇಂದು 158 ರೂಪಾಯಿ ಏರಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,37,400 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 1580 ರೂಪಾಯಿ ಹೆಚ್ಚಳ ಆಗಿದೆ. 22 ಕ್ಯಾರೆಟ್ 1 ಗ್ರಾಂ ಬೆಲೆ 12,595 ರೂಪಾಯಿ ಇದ್ದು, ಇಂದು 145 ರೂ ಏರಿಕೆ ಆಗಿದೆ. 10 ಗ್ರಾಂ ಬೆಲೆ 1,25,950 ರೂಪಾಯಿ ಇದೆ. ಇಂದು 10 ಗ್ರಾಂ ನಲ್ಲಿ 1450 ರೂ ಹೆಚ್ಚಳ ಆಗಿದೆ. ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 13,740 ರೂಪಾಯಿ ಇದ್ದು,
10 ಗ್ರಾಂ ಶುದ್ಧ ಚಿನ್ನಕ್ಕೆ 1,37,400 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ.ಬೆಳ್ಳಿ ಬೆಲೆ ಇಂದು 6 ರೂಪಾಯಿ ಏರಿಕೆಯಾಗಿದ್ದು, 247 ರೂ ಆಗಿದ್ದು, ಕೆಜಿಗೆ 2,47,000 ರೂ ಇದೆ. ಈ ತಿಂಗಳ, ಹಾಗೂ ಚಿನ್ನದ ಗರಿಷ್ಠ ದರ ಜನವರಿ 5 ಇಂದು 13740 ರೂಪಾಯಿ ದಾಖಲಾಗಿದೆ. ಕನಿಷ್ಠ ದರವು ಜ.1 ರಂದು 13506 ರೂ ಇತ್ತು, ಸದ್ಯ ಬೆಲೆ ಏರಿಕೆಯ ಟ್ರೆಂಡ್‌ನಲ್ಲಿದ್ದು 1,74 % ರಷ್ಟು ಹೆಚ್ಚಳ ಆಗಿದೆ.



