ಬಂಗಾರ ಅಂದ್ರೆ ದೂರ ಓಡುವಷ್ಟು ಬಂಗಾರದ ಬೆಲೆ ಏರಿಕೆಯಾಗಿದೆ. ಚಿನ್ನಾಭರಣ ಹಾಕಿಕೊಳ್ಳೋಕೇನೋ ಖುಷಿ ಆದ್ರೆ ದುಬಾರಿ ರೇಟ್ ಇದನ್ನು ಖರೀದಿ ಮಾಡೋ ಮುಂಚೆ ಹತ್ತು ಸಾರಿ ಯೋಚಿಸುವಂತೆ ಮಾಡಿದೆ.
ನಿಜಕ್ಕೂ ಒಂದು ಹತ್ತು ವರ್ಷದ ಹಿಂದೆ ಸಿಕ್ಕಾಪಟ್ಟೆ ಬಂಗಾರ ಮಾಡಿಸಿಕೊಂಡವರೇ ಅದೃಷ್ಟವಂತರು. ಈಗಿನ ಬೆಲೆಯಲ್ಲಿ ಅವುಗಳನ್ನು ಮಾಡಿದ್ರೂ ಕೂಡ ಅವರಿಗೆ ದುಪ್ಪಟ್ಟು ಲಾಭ ಸಿಗುತ್ತದೆ ನೋಡಿ. ಇದೇ ದೃಷ್ಟಿಯಲ್ಲಿ ಬೆಲೆ ಇಷ್ಟಿದ್ದರೂ ಸಹ ಬಂಗಾರದ ಅಂಗಡಿಗಳು ತುಂಬಿ ತುಳುಕುತ್ತಿರುತ್ತವೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,02,600 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,11,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 13,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,02,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 13,400 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 14,400 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಸೆಪ್ಟೆಂಬರ್ 16ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,02,600 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,11,930 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 83,950 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,340 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,02,600 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,11,930 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,340 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 1,02,600 ರೂ
- ಚೆನ್ನೈ: 1,02,600 ರೂ
- ಮುಂಬೈ: 1,02,600 ರೂ
- ದೆಹಲಿ: 1,02,750 ರೂ
- ಕೋಲ್ಕತಾ: 1,02,600 ರೂ
- ಕೇರಳ: 1,02,600 ರೂ
- ಅಹ್ಮದಾಬಾದ್: 1,02,650 ರೂ
- ಜೈಪುರ್: 1,02,750 ರೂ
- ಲಕ್ನೋ: 1,02,750 ರೂ
- ಭುವನೇಶ್ವರ್: 1,02,600 ರೂ



