ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಮತ್ತೋರ್ವ ಆರೋಪಿಯನ್ನು ಇದೀಗ ಅರೆಸ್ಟ್ ಮಾಡಲಾಗಿದೆ.
DRI ಅಧಿಕಾರಿಗಳಿಂದ ಸಾಹಿಲ್ ಸಕಾರಿಯಾ ಜೈನ್ ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ. ಇನ್ನೂ ಬಂಧಿತ ಆರೋಪಿಯ ಹಿನ್ನೆಲೆ ನೋಡೋದಾದರೆ, ಬಂಧಿತ ಸಾಹಿಲ್ ಜೈನ್ ಕುಟುಂಬ ಮೂಲತಃ ಬಳ್ಳಾರಿಯವರು. ಇಲ್ಲಿನ ಬ್ರಾಹ್ಮಿನ್ ರಸ್ತೆ ಬಳಿ ಇವರ ನಿವಾಸ ಇದೆ. ಸಾಹಿಲ್ ಜೈನ್ ತಂದೆ ಮಹೇಂದ್ರ ಜೈನ್ ಸಹೋದರರ ಬಟ್ಟೆ ಅಂಗಡಿ ಬಳ್ಳಾರಿಯಲ್ಲಿದೆ. ಸಾಹಿಲ್ ತಂದೆ ಮಹೇಂದ್ರ ಜೈನ್ ಸಹೋದರರು ಬಳ್ಳಾರಿಯಲ್ಲೇ ವಾಸವಿದ್ದಾರೆ.
ಸಾಹಿಲ್ ಜೈನ್ ಕುಟುಂಬ ಬೆಂಗಳೂರಿಗೆ ಶಿಫ್ಟ್ ಆಗಿದೆ. ಸಾಹಿಲ್ ಸೋದರ ಮಾವನ ಜೊತೆಗೆ ಮುಂಬೈನಲ್ಲಿ ವಾಸವಿದ್ದಾನೆ. ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಸಾಹಿಲ್ ಈ ಹಿಂದೆಯೂ ಅರೆಸ್ಟ್ ಆಗಿದ್ದ. ಮುಂಬೈ ಏರ್ ಪೋರ್ಟ್ನಲ್ಲಿ ಅಧಿಕಾರಿಗಳು ಬಂಧಿಸಿದ್ದರು. ಈತನಿಗೆ ಹಲವು ಚಿನ್ನದ ವ್ಯಾಪಾರಿಗಳ ಜೊತೆ ನಂಟು ಹೊಂದಿರೋ ಆರೋಪ ಇದೆ. ಮುಂಬೈನಲ್ಲಿ ಗೋಲ್ಡ್ ಮಾರಾಟ ಮಾಡಿದ ಶಂಕೆ ಇದೆ.
ವಿದೇಶದಿಂದ ಅಕ್ರಮವಾಗಿ ತಂದ ಚಿನ್ನವನ್ನು ಮಾರಾಟ ಮಾಡುವಲ್ಲಿ ಸಾಹಿಲ್, ರನ್ಯಾಗೆ ನೆರವು ನೀಡುತ್ತಿದ್ದ ಎನ್ನಲಾಗಿದೆ. ಸ್ನೇಹಿತರ ಮೂಲಕ ರನ್ಯಾ ರಾವ್, ಸಾಹಿಲ್ಗೆ ಪರಿಚಯ ಆಗಿದ್ದ. ಹಣದ ಆಸೆಗೆ ಚಿನ್ನ ಕಳ್ಳಸಾಗಣೆ ಕೃತ್ಯಕ್ಕೆ ಸಹಕಾರ ನೀಡಿದ್ದಾನೆ. ಅಂತೆಯೇ ಆತನ ಮಾರ್ಗದರ್ಶನದ ಮೂಲಕವೇ ರನ್ಯಾ ದುಬೈನಿಂದ ಬೆಂಗಳೂರು ಮೂಲಕ ಚಿನ್ನ ತರುತ್ತಿದ್ದಳು. ಬೆಂಗಳೂರಿಗೆ ಬಂದ ಚಿನ್ನವನ್ನು ಸಾಹಿಲ್ ವಿಲೇವಾರಿ ಮಾಡುತ್ತಿದ್ದ ಎಂಬ ಆರೋಪ ಇದೆ.ಅಲ್ಲದೇ ರನ್ಯಾ ರಾವ್ ಪ್ರಕರಣದಲ್ಲಿ ಈತನಿಗೆ 15,20 ರಷ್ಟು ಕಮಿಷನ್ ಸಿಗುತ್ತಿತ್ತು ಎನ್ನಲಾಗಿದೆ.