ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ಇನ್ನೆರಡು ದಿನ ಮಾತ್ರವೇ ಭಾಕಿ ಇದೆ. ನೆಚ್ಚಿನ ನಟನ ಬರ್ತಡೇಯನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಬೇಕು ಎಂದುಕೊಂಡಿದ್ದ ಅಭಿಮಾನಿಗಳಿಗೆ ಈ ಭಾರಿಯೂ ಬೇಸರವಾಗಿದೆ. ತನ್ನ ಬರ್ತಡೇಯನ್ನು ಈ ಭಾರಿ ಆಚರಿಸುತ್ತಿಲ್ಲ ಎಂದು ತಿಳಿಸಿರುವ ಗಣೇಶ್ ಅದಕ್ಕಾಗಿ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟ, ಜುಲೈ-2 ರಂದು ನನ್ನ ಜನ್ಮ ದಿನ ಇದೆ. ಆದರೆ, ಈ ಸಲ ನಾನು ನಿಮ್ಮನ್ನ ಭೇಟಿ ಮಾಡೋಕೆ ಆಗೋದಿಲ್ಲ. ಆ ದಿನವೂ ನಾನು ಪಿನಾಕ ಮತ್ತು Yours Sincerely, Raam ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದೇನೆ.
ಈ ಎರಡೂ ಚಿತ್ರದ ಚಿತ್ರೀಕರಣ ಔಟ್ ಡೋರ್ ಅಲ್ಲಿಯೇ ಇದೆ. ಹಾಗಾಗಿಯೇ ನಾನು ನಿಮ್ಮನ್ನ ಮನೆಯಲ್ಲಿ ಭೇಟಿ ಆಗೋಕೆ ಸಾಧ್ಯವಾಗೋದಿಲ್ಲ. ನನ್ನ ಜನ್ಮ ದಿನಕ್ಕೆ ಮನೆ ಬಳಿಗೆ ಬರ್ತಿದ್ದ ನೀವು ಎಲ್ಲಿ ಇರ್ತಿರೋ ಅಲ್ಲಿಂದಲೇ ನನಗೆ ಆಶೀರ್ವಾದ ಮಾಡಿ ಎಂದು ಅಭಿಮಾನಿಗಳ ಬಳಿ ಗಣೇಶ್ ಮನವಿ ಮಾಡಿದ್ದಾರೆ.
ನಿಮ್ಮನ್ನ ರಂಜಿಸೋದಕ್ಕಿಂತ ದೊಡ್ಡ ಹಬ್ಬ ನನಗೆ ಮತ್ತೊಂದಿಲ್ಲ. ಆದ ಕಾರಣ ಯಾರು ಕೂಡ ಮನೆಯ ಬಳಿ ಬರದೇ ನೀವು ಎಲ್ಲಿ ಇರ್ತಿರೋ ಅಲ್ಲಿಂದಲೇ ಆಶೀರ್ವಾದ ಮಾಡಿ. ಜೊತೆಗೆ ಈ ದಿನ ನೀವು “ಕಷ್ಟದಲ್ಲಿ ಇರೋರಿಗೆ ನೆರವಾಗಿ” ಎಂದು ಗಣೇಶ್ ಅಭಿಮಾನಿಗಳ ಬಳಿ ಕೇಳಿಕೊಂಡಿದ್ದಾರೆ.