ಗೋಣಿಬಸವೇಶ್ವರರ ಮಹಾರಥೋತ್ಸವ ಆ.18ಕ್ಕೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಅಡವಿಸೋಮಾಪೂರ ಗ್ರಾಮದ ಗೋಣಿಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಆ.12ರಿಂದ 19ರವರೆಗೆ ಗೋಣಿಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ, ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ, ಪ್ರವಚನ ಮತ್ತು ಜಾತ್ರಾ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗೋಣಿಬಸವೇಶ್ವರ ಟ್ರಸ್ಟ್ ಕಮಿಟಿ ಗೌರವಾಧ್ಯಕ್ಷ ಆನಂದಪ್ಪ ಪುರದ ಹೇಳಿದರು.

Advertisement

ನಗರದ ಪ್ರತಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಆ.12ರಂದು ಬೆಳಗ್ಗೆ 6ಕ್ಕೆ ನಗರದ ಬನ್ನಿಕಟ್ಟಿ ದೇವಸ್ಥಾನದಿಂದ ಸಕಲ ವಾದ್ಯಗಳು, ಕುಂಭಮೇಳದೊಂದಿಗೆ ಗೋಣಿಬಸವೇಶ್ವರನ ಮೂರ್ತಿ ಹಾಗೂ ಕಳಸದ ಮೆರವಣಿಗೆಯು ಗ್ರಾಮಕ್ಕೆ ಆಗಮಿಸುವದು. ಸಾಯಂಕಾಲ 6ಕ್ಕೆ ಗೋಣಿಬಸವೇಶ್ವರರ ಚರಿತ್ರೆಯ ಪ್ರವಚನ ಆರಂಭವಾಗಲಿದೆ.

ಕೊರ್ಲಹಳ್ಳಿ ಗೋಣಿಬಸವೇಶ್ವರ ಸಂಸ್ಥಾನಮಠದ ಪಟ್ಟದ ಚಿನ್ಮಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಗ್ರಾ.ಪಂ ಅಧ್ಯಕ್ಷೆ ಪವಿತ್ರ ಹೊಸಳ್ಳಿ ಅಧ್ಯಕ್ಷತೆ ವಹಿಸುವರು. ಗ್ರಾಮೀಣ ವಲಯದ ಸಿಪಿಐ ಸಿದ್ರಾಮೇಶ್ವರ ಗಡೇದ, ಶ್ಯಾಮಸುಂದರ ಡಂಬಳ, ಈರನಗೌಡ ಹರ್ಲಾಪೂರ ಭಾಗವಹಿಸುವರು. ಆ.12 ರಿಂದ ಆ.16ರವರೆಗೆ ಪ್ರತಿ ದಿನ ಸಾಯಂಕಾಲ 6ರಿಂದ ಶಂಭುಲಿಂಗ ಶಾಸ್ತ್ರಿಗಳು ಗೋಣಿಬಸವೇಶ್ವರ ಚರಿತ್ರೆಯ ಪ್ರವಚನ ಮಾಡಲಿದ್ದಾರೆ ಎಂದರು.

ಆ.13 ರಂದು ಬೆಳಗ್ಗೆ 7.45ಕ್ಕೆ ಗೋಣಿಬಸವೇಶ್ವರರ ಮೂರ್ತಿ ಪ್ರತಿಷ್ಠಾಪನೆ, ಬೆಳಗ್ಗೆ 10ಕ್ಕೆ ಜೀಣೋದ್ಧಾರಗೊಂಡ ದೇವಸ್ಥಾನದ ಲೋಕಾರ್ಪಣೆ ಮತ್ತು ಕಳಸಾರೋಹಣ ಹಮ್ಮಿಕೊಳ್ಳಲಾಗಿದೆ. ಸಾಯಂಕಾಲ 6ಕ್ಕೆ ಪ್ರವಚನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸೋಮಶಂಕರ ಸ್ವಾಮೀಜಿ, ಕಲ್ಲಯ್ಯಜ್ಜನವರು, ಪಟ್ಟದ ಚಿನ್ಮಯ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ ಭಾಗವಹಿಸುವರು. ಮಾಜಿ ಶಾಸಕರಾದ ಬಿ.ಆರ್. ಯಾವಗಲ್ಲ, ಡಿ.ಆರ್. ಪಾಟೀಲ, ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಈರಪ್ಪ ದೊಡ್ಡಮನಿ ಭಾಗವಹಿಸುವರು ಎಂದರು.

ಆ.14 ರಂದು ಸಾಯಂಕಾಲ 7.30ಕ್ಕೆ ಗೋಣಿಬಸವೇಶ್ವರ ಚರಿತ್ರೆಯ ಪ್ರವಚನ ನಡೆಯಲಿದ್ದು, ಸಾನ್ನಿಧ್ಯ ಹರ್ಲಾಪೂರ ಕೊಟ್ಟೂರೇಶ್ವರ ಕೊಟ್ಟೂರೇಶ್ವರ ಸ್ವಾಮೀಜಿ ವಹಿಸುವರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಕೇಶವ ದೇವಾಂಗ, ಮಲ್ಲನಗೌಡ ಪಾಟೀಲ ಭಾಗವಹಿಸುವರು. ನಂತರ ಗ್ರಾಮದ ವಿವಿಧ ಕಲಾ ತಂಡದಿಂದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಆ.15 ರಂದು ಸಾಯಂಕಾಲ 7.30ಕ್ಕೆ ಗೋಣಿಬಸವೇಶ್ವರ ಚರಿತ್ರೆಯ ಪ್ರವಚನ ಮಾಡಲಾಗುತ್ತಿದೆ. ಬೈರನಹಟ್ಟಿ ವಿರಕ್ತಮಠದ ದೊರೆಸ್ವಾಮಿ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಡಾ. ಚಂದ್ರ ಲಮಾಣಿ, ವೆಂಕಟೇಶ ಹೂವಣ್ಣವರ, ಶೇಖರ ಭೂಮಿ, ದೇವಪ್ಪ ದೊಡ್ಡಮನಿ, ಅಲ್ಲಸಾಬ ಕುಮನೂರ ಭಾವಗಹಿಸುವರು. ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದರು.

ಆ.16ರಂದು ಸಾಯಂಕಾಲ 7.30ಕ್ಕೆ ಗೋಣಿಬಸವೇಶ್ವರ ಚರಿತ್ರೆಯ ಪ್ರವಚನದ ಸಾನ್ನಿಧ್ಯವನ್ನು ಮಣಕವಾಡದ ಮೃತ್ಯುಂಜಯ ಸ್ವಾಮೀಜಿ ವಹಿಸುವರು. ಸಂಸದ ಪಿ.ಸಿ. ಗದ್ದಿಗೌಡ್ರ, ಶಾಸಕ ಸಿ.ಸಿ. ಪಾಟೀಲ, ವಿ.ಪ ಸದಸ್ಯ ಎಸ್.ವಿ. ಸಂಕನೂರ, ಡಿವೈಎಸ್ಪಿ ಮುರ್ತುಜಾ ಖಾದ್ರಿ, ಸಂಗಮೇಶ ಕೊಳ್ಳಿ ಭಾಗವಹಿಸುವರು ಎಂದರು.

ಆ.17ರಂದು ಸಾಯಂಕಾಲ 7.30ಕ್ಕೆ ಗೋಣಿಬಸವೇಶ್ವರ ಚರಿತ್ರೆಯ ಪ್ರವಚನದ ಸಾನ್ನಿಧ್ಯ ಬೂದಿಶ್ವರಮಠದ ಅಭಿನವ ಬೂದಿಶ್ವರ ಸ್ವಾಮೀಜಿ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಮಾಜಿ ಶಾಸಕ ಬಿ.ಆರ್. ಯಾವಗಲ್ಲ, ಸಿದ್ದಲಿಂಗೇಶ ಪಾಟೀಲ, ಮಹೇಶ ಹರ್ಲಾಪೂರ, ಬಸವರಾಜ ಈರಜನವರ ಭಾಗವಹಿಸುವರು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈರಪ್ಪ ಮೌರ್ಯ, ಅಲ್ಲಾಸಾಬ ಕುಮ್ಮನೂರ, ಈರಪ್ಪ ಗುರಗಣ್ಣವರ, ಸಿದ್ದಪ್ಪ ಸಿದ್ನೇಕೊಪ್ಪ, ಮಂಜುನಾಥ ನಾಗಾವಿ, ಬಸವರಾಜ ಈ, ಹುಚ್ಚೀರಪ್ಪ ಹರ್ತಿ, ಅಮರೇಶ ಜಕ್ಕಮ್ಮನವರ, ಮಂಜುನಾಥ ಪೂಜಾರ, ಲಂಕೆಪ್ಪ ಹೊಸಳ್ಳಿ, ಸಂಗಪ್ಪ ಯೋಗಿ, ಮಂಜುನಾಥ ಜಡಿ ಇದ್ದರು.

ಆ.18ರಂದು ಬೆಳಗ್ಗೆ 6ಕ್ಕೆ ಗೋಣಿಬಸವೇಶ್ವರ ದೇವರಿಗೆ ಮಹಾರುದ್ರಾಭಿಷೇಕ ನಂತರ ಸಾಯಂಕಾಲ 5.30ಕ್ಕೆ ಗೋಣಿಬಸವೇಶ್ವರರ ಮಹಾರಥೋತ್ಸವ ಹಮ್ಮಿಕೊಳ್ಳಲಾಗಿದೆ. ರಾತ್ರಿ 9ಕ್ಕೆ ಗೋಣಿಬಸವೇಶ್ವರ ನಾಟ್ಯ ಸಂಘದಿಂ`ತವರಿದ್ದರೂ ತಬ್ಬಲಿಯಾದೆ’ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಆ.19ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಮಟ್ಟದ ಜಾನಪದ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಸಾಯಂಕಾಲ 5.30ಕ್ಕೆ ಕಡುಬಿನ ಕಾಳಗ, ಲಘು ರಥೋತ್ಸವ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 2ಕ್ಕೆ ಬಯಲು ಜಂಗೀ ನಿಕಾಲಿ ಕುಸ್ತಿ ಹಮ್ಮಿಕೊಳ್ಳಲಾಗಿದೆ ಎಂದು ಆನಂದಪ್ಪ ಪುರದ ತಿಳಿಸಿದರು.


Spread the love

LEAVE A REPLY

Please enter your comment!
Please enter your name here