ಬೆಂಗಳೂರು: ಮನೆಯ ಎರಡನೇ ಯಜಮಾನರಿಗೂ ಅನ್ನ ಭಾಗ್ಯ ಹಣ ನೀಡುವ ಮೂಲಕ ಆಹಾರ ಇಲಾಖೆ ರಾಜ್ಯದ ಜನತೆಗೆ ಗುಡ್ ನ್ಯೂಸ್ ನೀಡಿದೆ. ಈ ಕುರಿತ ಡೀಟೈಲ್ಸ್ ಇಲ್ಲಿದೆ. ಸರ್ಕಾರ ನೀಡಿರುವ ಯೋಜನೆಗಳಲ್ಲಿ ಒಂದಲ್ಲ ಒಂದು ಕೊರತೆಗಳಿದ್ದು, ಅನ್ನ ಭಾಗ್ಯ ಯೋಜನೆ ಬಗ್ಗೆ ಯು ಸಾಕಷ್ಟು ದೂರುಗಳು ಬಂದಿವೆ.
ಅನ್ನ ಭಾಗ್ಯ ಯೋಜನೆ DBT ಪ್ರತಿ ತಿಂಗಳು 8 ರಿಂದ 10 ಸಾವಿರ ಜನರಿಗೆ ಸಿಗದೆ ದೂರುಗಳು ಹೆಚ್ಚಾಗುತ್ತಲೆ ಇತ್ತು.ಈ ಹಿಂದೆ ಕೇವಲ ಕೇವಲ ಕಾರ್ಡ್‌ನ ಮೊದಲ ಯಜಮಾನರಿಗೆ DBTಮೂಲಕ ಹಣ ಹಾಕಲಾಗುತ್ತಿತ್ತು. ಆದ್ರೀಗ ದೂರುಗಳು ಹೆಚ್ಚಾಗಿದ್ದರಿಂದ ಮನೆಯ ಎರಡನೇ ಯಜಮಾನರಿಗೂ ಹಣ ಹಾಕುವುದಾಗಿ ನಿರ್ಧರಿಸಲಾಗಿದೆ.
ಈಗಾಗಲೇ ಕ್ಯಾಬಿನೆಟ್ ಒಪ್ಪಿಗೆ ಸಿಕ್ಕಿದ್ದು, ಅಧಿಕೃತವಾಗಿ ಈ ತಿಂಗಳಿನಿಂದ ಜಾರಿ ಮಾಡಲಾಗುತ್ತದೆ. ಇದರಿಂದ ಸುಮಾರು 9ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ದಾರರಿಗೆ ಇದರ ಲಾಭ ಸಿಗಲಿದೆ.
ಒಟ್ಟಿನಲ್ಲಿ ಯೋಜನೆಗಳು ಘೋಷಣೆ ಆಗಿ ಜಾರಿಗೆ ಬಂದರು ಸರಿಯಾಗಿ ಸಮರ್ಪಕವಾಗಿ ನಿರ್ವಹಣೆ ಆಗದೆ ದೂರುಗಳ ಸರಮಾಲೆಯೆ ಕಾಣುತ್ತಿದ್ದು ಇನ್ನು ಮುಂದೆ ಆದರು ಜನರಿಗೆ ಯೋಜನೆಗಳ ಪ್ರಯೋಜನ ಸರಿಯಾಗಿ ಸಿಗಲಿದೆಯ ನೋಡಬೇಕಿದೆ.