ನವದೆಹಲಿ: ಟಿ20 ವಿಶ್ವಕಪ್‌ಗೆ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ವೇಗಿ ಜೋಶ್ ಹೇಝಲ್ವುಡ್ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಇದೇ ವಾರದಿಂದ ಮತ್ತೆ ಅಭ್ಯಾಸ ಆರಂಭಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಆಸ್ಟ್ರೇಲಿಯಾ ತಂಡದ ಮೂವರು ಪ್ರಮುಖ ಆಟಗಾರರು ಗಾಯಗೊಂಡಿರುವ ಹಿನ್ನೆಲೆ, ಕ್ರಿಕೆಟ್ ಆಸ್ಟ್ರೇಲಿಯಾ ಟಿ20 ವಿಶ್ವಕಪ್‌ಗೆ ತಾತ್ಕಾಲಿಕ ತಂಡವನ್ನು ಪ್ರಕಟಿಸಿತ್ತು. ಆದರೆ ಹೇಝಲ್ವುಡ್ ಫಿಟ್ ಆಗಿರುವುದು ಆಸೀಸ್ ತಂಡಕ್ಕೆ ದೊಡ್ಡ ಬಲ ತಂದಿದೆ.
ಸ್ನಾಯು ಸೆಳೆತ ಹಾಗೂ ಅಕಿಲೀಸ್ ಗಾಯದಿಂದ ದೂರ ಉಳಿದಿದ್ದ ಹೇಝಲ್ವುಡ್, ವಿಶ್ವಕಪ್ ಆರಂಭಕ್ಕೂ ಮುನ್ನ ಸಂಪೂರ್ಣ ಫಿಟ್ನೆಸ್ ಪಡೆಯಲಿದ್ದು, ಮಿಚೆಲ್ ಸ್ಟಾರ್ಕ್ ಜೊತೆಗೂಡಿ ಆಸ್ಟ್ರೇಲಿಯಾದ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ತಂಡ ಗ್ರೂಪ್–2ರಲ್ಲಿ ಸ್ಥಾನ ಪಡೆದಿದ್ದು, ಶ್ರೀಲಂಕಾ, ಝಿಂಬಾಬ್ವೆ, ಐರ್ಲೆಂಡ್ ಮತ್ತು ಒಮಾನ್ ವಿರುದ್ಧ ಮೊದಲ ಸುತ್ತಿನ ಪಂದ್ಯಗಳನ್ನು ಆಡಲಿದೆ. ಈ ತಂಡಗಳನ್ನು ಎದುರಿಸಿ ಆಸೀಸ್ ಪಡೆ ದ್ವಿತೀಯ ಸುತ್ತಿಗೆ ಸುಲಭವಾಗಿ ಪ್ರವೇಶಿಸುವ ವಿಶ್ವಾಸದಲ್ಲಿದೆ.



