ಗ್ರಾಹಕರಿಗೆ ಸಿಹಿಸುದ್ದಿ: ಮೊಬೈಲ್ ಮತ್ತು ಚಾರ್ಜರ್ʼಗಳ ಮೇಲಿನ ತೆರಿಗೆ ಇಳಿಕೆ!

1
Spread the love

ನವದೆಹಲಿ: ಮೊಬೈಲ್ ಹಾಗೂ​ ಚಾರ್ಜರ್​ಗಳ ಮೇಲಿನ ತೆರಿಗೆ ಇಳಿಕೆ ಬಗ್ಗೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ. ಹೌದು ಮುಂಬರುವ ದಿನಗಳಲ್ಲಿ ಮೊಬೈಲ್ ಹಾಗೂ ಮೊಬೈಲ್ ಚಾರ್ಜರ್​ಗಳ ಬೆಲೆಯೂ ಕೂಡ ಅಗ್ಗವಾಗಲಿವೆ. ಇವುಗಳ ಮೇಲೆ ಇರುವ ಕಸ್ಟಮ್ಸ್ ಡ್ಯೂಟಿಯನ್ನು ಸುಮಾರು ಶೇಕಡಾ 15 ರಷ್ಟು ಇಳಿಕೆ ಮಾಡಲಾಗಿದೆ. ಅವುಗಳ ಜೊತೆಗೆ ಚರ್ಮ, ಬಟ್ಟೆ, ಉತ್ಪಾನೆಗಳ ಮೇಲಿನ ಕಸ್ಟಮ್ಸ್ ಚಾರ್ಜ್​ ಅನ್ನು ಕೂಡ ಇಳಿಕೆ ಮಾಡಲಾಗಿದ್ದು.

Advertisement

ಇವು ಕೂಡ ಮುಂಬರುವ ದಿನಗಳಲ್ಲಿ ಅಗ್ಗವಾಗಲಿವೆ ಎಂದು ಹೇಳಿದ್ದಾರೆ.  ಕೇಂದ್ರ ಸರ್ಕಾರವು ಈ ವರ್ಷದ ಜನವರಿಯಲ್ಲಿ ಮೊಬೈಲ್ ಫೋನ್ ತಯಾರಿಕೆಯಲ್ಲಿ ತೊಡಗಿರುವ ಹಲವಾರು ಬಿಡಿ ಭಾಗಗಳ ಮೇಲಿನ ಆಮದು ಸುಂಕವನ್ನು 15% ರಿಂದ 10% ಕ್ಕೆ ಇಳಿಸಿದೆ. ಇನ್ನು ದೇಶೀಯ ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ಮೌಲ್ಯವರ್ಧನೆ ಹೆಚ್ಚಿಸುವ ಸಲುವಾಗಿ ಮೊಬೈಲ್ ಫೋನ್, ಮೊಬೈಲ್ ಪಿಸಿಬಿಎ ಮತ್ತು ಮೊಬೈಲ್ ಚಾರ್ಜರ್‌ಗಳ ಮೇಲಿನ ಬಿಸಿಡಿಯನ್ನು ಇಳಿಸಲಾಗಿದೆ ಎಂದು ಹೇಳಿದ್ದಾರೆ.


Spread the love

1 COMMENT

  1. ಅಬ್ಬಾ ಎಂತಾ ಸಿಹಿ ಸುದ್ದಿ ಇದು,ತೆರಿಗೆ ಇಳಿಕೆ ಮಾಡಲೇ
    ಬೇಕಾದ ಸಾಮಗ್ರಿಗಳ ಬದಲಿಗೆ ಮೊಬೈಲ್ ಚಾರ್ಜರ್
    ತೆರಿಗೆ ಇಳಿಸಿ ದೇಶದ ಜನತೆ ಈಗಿರುವ ಮೊಬೈಲ್ ಬಿಟ್ಟು
    ಹೊಸ ಮೊಬೈಲ್ ಖರೀದಿಸಲು ಮುಂದಾಗಬೇಕಾ?

LEAVE A REPLY

Please enter your comment!
Please enter your name here