ಮಧುಮೇಹಿಗಳಿಗೆ ಸಿಕ್ತು ಗುಡ್ ನ್ಯೂಸ್: ಈ ಮಾತ್ರೆಯ ಬೆಲೆ ಶೇ. 90% ಇಳಿಕೆ!

0
Spread the love

ನವದೆಹಲಿ:- ಇತ್ತೀಚಿನ ವರ್ಷಗಳಲ್ಲಿ ಮಧುಮೇಹ ಅನ್ನೋದು ಕಾಮನ್ ಆಗಿ ಬಿಟ್ಟಿದೆ. ಪ್ರತಿಯೊಬ್ಬರ ಮನೆಯಲ್ಲಿ ಒಬ್ಬರಾದರೂ ಡಯಾಬಿಟಿಸ್ ಪೇಶೆಂಟ್ ಇದ್ದೇ ಇರುತ್ತಾರೆ. ಅಲ್ಲದೇ ಇವರು ಮಾತ್ರೆಗಳಿಗೆ ಹೆಚ್ಚು ಇನ್ವೆಸ್ಟ್ ಮಾಡುತ್ತಾ, ಅಲ್ಲದೇ ತಿನ್ನುವ ಆಹಾರದಲ್ಲಿ ಕಟ್ಟುನಿಟ್ಟಿನ ರೂಲ್ಸ್ ಫಾಲೋ ಮಾಡುತ್ತಾ ನರಕಯಾತನೆ ಅನುಭವಿಸುತ್ತಾರೆ.

Advertisement

ಇಂತಹ ಮಧುಮೇಹಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಔಷಧ ಬೆಲೆ ಶೇ.90 ಇಳಿಕೆ ಮಾಡಲಾಗಿದೆ. ಮಧುಮೇಹಿಗಳು ಬಳಸುವ ಎಂಪಾಗ್ಲಿಫ್ಲೋಜಿನ್‌ ಅಂಶದ ಮಾತ್ರೆಯ ಬೆಲೆ 90% ರಷ್ಟು ಕಡಿತವಾಗಿದೆ.

ಹೌದು, ಪೇಟೆಂಟ್‌ ಅವಧಿ ಮುಗಿದ ಕಾರಣ ಹಲವಾರು ದೇಶೀಯ ಔಷಧ ತಯಾರಕರು ಜೆನೆರಿಕ್ ಮಾದರಿ ಬಿಡುಗಡೆ ಮಾಡುವುದಾಗಿ ಘೋಷಿಸಿವೆ. ಮಧುಮೇಹ ಔಷಧ ಎಂಪಾಗ್ಲಿಫ್ಲೋಜಿನ್‌ನ ಬೆಲೆ 90% ರಷ್ಟು ಕುಸಿದಿದೆ. ಮ್ಯಾನ್‌ಕೈಂಡ್ ಫಾರ್ಮಾ, ಅಲ್ಕೆಮ್ ಲ್ಯಾಬೊರೇಟರೀಸ್, ಗ್ಲೆನ್‌ಮಾರ್ಕ್, ಕೊರೊನಾ ರೆಮಿಡೀಸ್ ಕೆಲವು ಕಂಪನಿಗಳನ್ನು ಬಿಡುಗಡೆ ಮಾಡಿದ್ದು, ಹೆಚ್ಚಿನ ಭಾರತೀಯ ರೋಗಿಗಳಿಗೆ ಈ ಔಷಧವನ್ನು ಕೈಗೆಟುಕುವಂತೆ ಮಾಡಿದೆ.

ಮಾರುಕಟ್ಟೆ ಪಾಲಿನ ದೃಷ್ಟಿಯಿಂದ ಭಾರತದ ನಾಲ್ಕನೇ ಅತಿದೊಡ್ಡ ಕಂಪನಿಯಾದ ಮ್ಯಾನ್‌ಕೈಂಡ್ ಫಾರ್ಮಾ, 10 ಮಿಗ್ರಾಂ ಟ್ಯಾಬ್ಲೆಟ್‌ಗೆ 5.49 ರೂ. ಮತ್ತು 25 ಮಿಗ್ರಾಂ ಟ್ಯಾಬ್ಲೆಟ್‌ಗೆ 9.9 ರೂ.ಗೆ ಮಾರಾಟ ಮಾಡುವುದಾಗಿ ತಿಳಿಸಿದೆ. ಇದು 90% ಕ್ಕಿಂತ ಹೆಚ್ಚು ಅಗ್ಗವಾಗಿದೆ.


Spread the love

LEAVE A REPLY

Please enter your comment!
Please enter your name here