ದೆಹಲಿ: ಹೋಟೆಲ್, ರೆಸ್ಟೋರೆಂಟ್ ಹಾಗೂ ಆಹಾರೋದ್ಯಮ ವಲಯಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.
ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ಇಂದು ಹೊಸ ದರಗಳು ಜಾರಿಗೆ ಬಂದಿದ್ದು, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುವವರಿಗೆ ಸ್ವಲ್ಪ ನಿರಾಳತೆ ದೊರಕಿದೆ.
ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಈ ಬೆಲೆ ಇಳಿಕೆಯ ಘೋಷಣೆ ಮಾಡಿದ್ದು, ಪ್ರತಿ 19 ಕೆಜಿ ವಾಣಿಜ್ಯ ಸಿಲಿಂಡರ್‌ಗೆ 5 ರೂಪಾಯಿಯಷ್ಟು ಕಡಿತ ಮಾಡಲಾಗಿದೆ. ಇದರಿಂದಾಗಿ ದೆಹಲಿಯಲ್ಲಿ ಸಿಲಿಂಡರ್‌ನ ಹೊಸ ಬೆಲೆ ₹1,590.50 ಆಗಿದ್ದು, ಮೊದಲು ಅದು ₹1,595.50 ಇತ್ತು. ಕೋಲ್ಕತ್ತಾದಲ್ಲಿ 6.50 ರೂಪಾಯಿ ಇಳಿಕೆ ಆಗಿ ಹೊಸ ಬೆಲೆ ₹1,694 ಆಗಿದೆ. ಚೆನ್ನೈನಲ್ಲಿ ₹1,750 (₹4.50 ಇಳಿಕೆ) ಮತ್ತು ಮುಂಬೈನಲ್ಲಿ ₹1,542 (₹5 ಇಳಿಕೆ)ಗೆ ಮಾರಾಟವಾಗುತ್ತಿದೆ.
ಈ ಬೆಲೆ ಇಳಿಕೆಯು ಹೋಟೆಲ್, ಊಟಗೃಹ, ಕೇಟರಿಂಗ್ ಮತ್ತು ಆಹಾರೋದ್ಯಮ ವಲಯದವರಿಗೆ ಕೆಲವು ಮಟ್ಟಿಗೆ ನೆರವಾಗಲಿದೆ ಎಂದು ಉದ್ಯಮಿಗಳು ತಿಳಿಸಿದ್ದಾರೆ. ಆದರೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಮನೆಗಳಲ್ಲಿ ಬಳಸುವ ಸಾಮಾನ್ಯ ಸಿಲಿಂಡರ್‌ಗಳಿಗೆ ಹಳೆಯ ದರಗಳೇ ಮುಂದುವರಿಯಲಿವೆ. ಸಾಮಾನ್ಯ ಜನರಿಗೆ ಬೆಲೆ ಇಳಿಕೆಯ ನಿರೀಕ್ಷೆ ಇದ್ದರೂ ಈ ಬಾರಿ ಇಳಿಕೆ ಕೇವಲ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಿಗೆ ಮಾತ್ರ ಸೀಮಿತವಾಗಿದೆ.


