Gold Rate Today: ಗೋಲ್ಡ್‌ ಪ್ರಿಯರಿಗೆ ಗುಡ್‌ನ್ಯೂಸ್! ಇಂದು ಮತ್ತೆ ಚಿನ್ನದ ಬೆಲೆ ಇಳಿಕೆ – ಇಲ್ಲಿದೆ ಇಂದಿನ ದರ ವಿವರ

0
Spread the love

ಚಿನ್ನದ ದರ ಹೇಗೆ ಇರಲಿ, ಎಷ್ಟೇ ಇರಲಿ ಚಿನ್ನ ಖರೀದಿಸಬೇಕು ಎಂದಾಗ ಕೊಳ್ಳುಗರು ನಾ ಮುಂದು ತಾ ಮುಂದು ಎಂದು ಖರೀದಿಗೆ ತೊಡಗುತ್ತಾರೆ. ಅದರಲ್ಲೂ ಹಬ್ಬದ ಸಂದರ್ಭಗಳಲ್ಲಿ ಚಿನ್ನ ಖರೀದಿಯ ಭರಾಟೆಯ ಜೋರಾಗಿಯೇ ಇರುತ್ತದೆ. ಅಂತೂ ಇಂದು ಬಂಗಾರದ ದರದಲ್ಲಿ ಸಮಾಧಾನಕರ ದರ ಕುಸಿತವಾಗಿದ್ದು ಆಭರಣಕೊಳ್ಳಬಯಸುವವರು ಇದ್ದುದರಲ್ಲೇ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.

Advertisement

ಚಿನ್ನದ ಬೆಲೆ ಇವತ್ತು ಶುಕ್ರವಾರ ಗ್ರಾಮ್​ಗೆ 15 ರೂ ಮಾತ್ರವೇ ಇಳಿದಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆಯಲ್ಲಿ ವ್ಯತ್ಯಯವಾಗಿಲ್ಲ. ಸಿಂಗಾಪುದಲ್ಲಿ ತುಸು ಹೆಚ್ಚಿದೆ. ಇನ್ನು ಬೆಳ್ಳಿ ಬೆಲೆ ಇವತ್ತು ಗ್ರಾಮ್​ಗೆ 2 ರೂ ಏರಿ 118 ರೂ ಮುಟ್ಟಿದೆ. ಜುಲೈ 23ರಂದು 119 ರೂನ ಗರಿಷ್ಠ ಮಟ್ಟಕ್ಕೆ ಬೆಳ್ಳಿ ಬೆಲೆ ಹೆಚ್ಚಿತ್ತು. ಈಗ ಅದರ ಸಮೀಪಕ್ಕೆ ಬೆಲೆ ಹೋಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 92,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,00,530 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 92,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 11,800 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 12,800 ರೂ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 22ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 92,150 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,00,530 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 75,520 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,180 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 92,150 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,00,530 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,180 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)

  • ಬೆಂಗಳೂರು: 92,150 ರೂ
  • ಚೆನ್ನೈ: 92,150 ರೂ
  • ಮುಂಬೈ: 92,150 ರೂ
  • ದೆಹಲಿ: 92,300 ರೂ
  • ಕೋಲ್ಕತಾ: 92,150 ರೂ
  • ಕೇರಳ: 92,150 ರೂ
  • ಅಹ್ಮದಾಬಾದ್: 92,200 ರೂ
  • ಜೈಪುರ್: 92,300 ರೂ
  • ಲಕ್ನೋ: 92,300 ರೂ
  • ಭುವನೇಶ್ವರ್: 92,150 ರೂ

 

 


Spread the love

LEAVE A REPLY

Please enter your comment!
Please enter your name here