ಸರ್ಕಾರಿ ನೌಕರರಿಗೆ ಕೇಂದ್ರದಿಂದ ಸಿಕ್ತು ಭರ್ಜರಿ ಗುಡ್ ನ್ಯೂಸ್: ಶೀಘ್ರವೇ ಬ್ಯಾಂಕ್​​ ಖಾತೆಗೆ ಹಣ ಜಮಾ!

0
Spread the love

ನವದೆಹಲಿ:- ಹೊಸ ವರ್ಷಕ್ಕೆ ಸರ್ಕಾರಿ ನೌಕಕರಿಗೆ ಕೇಂದ್ರ ಸರ್ಕಾರದಿಂದ ಗುಡ್​ನ್ಯೂಸ್​ ಸಿಕ್ಕಿದೆ. ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರ ನೌಕರರ ಖಾತೆಗೆ 11,250 ರೂ. ಹಣ ಜಮಾ ಮಾಡಲಿದೆ. ಹೀಗಾಗಿ 2025ರ ವರ್ಷವು ಕೇಂದ್ರ ಸರ್ಕಾರಿ ನೌಕರರಿಗೆ ಅದೃಷ್ಟದ ವರ್ಷವೇ ಆಗಿರಲಿದೆ.

Advertisement

ಕಳೆದ ವರ್ಷ 2024ರ ಅಕ್ಟೋಬರ್ ತಿಂಗಳಲ್ಲಿ ಕೇಂದ್ರ ಸರ್ಕಾರ ಡಿಎ ಶೇ.3ರಷ್ಟು ಹೆಚ್ಚು ಮಾಡಿತ್ತು. ಇದರ ಪರಿಣಾಮ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಶೇ.53ಕ್ಕೆ ಏರಿಕೆ ಆಗಿತ್ತು. ಈ ತುಟ್ಟಿಭತ್ಯೆಯನ್ನು ಇಷ್ಟು ದಿನ ತಡೆ ಹಿಡಿಯಲಾಗಿತ್ತು. ಈಗ ತಡೆ ಹಿಡಿಯಲಾಗಿದ್ದ ಡಿಎ ಬಾಕಿ ಪಾವತಿಯನ್ನು ಬಜೆಟ್​ನಲ್ಲಿ ಘೋಷಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಾದ ಬೆನ್ನಲ್ಲೇ ಕೇಂದ್ರ ನೌಕರರ ಖಾತೆಗೆ ಹಣ ಬರಲಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಹಣಕಾಸು ವರ್ಷದ ಬಜೆಟ್ ಅನ್ನು ಫೆಬ್ರವರಿ 1 ರಂದು ಮಂಡಿಸಲಿದ್ದಾರೆ. ಬಜೆಟ್​​ ಮಂಡನೆ ವೇಳೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೆಲವು ಸಿಹಿ ಸುದ್ದಿಗಳು ಸಿಗಲಿವೆ.

ಕರೋನಾ ಅವಧಿಯಲ್ಲಿನ ಅಸಾಧಾರಣ ಪರಿಸ್ಥಿತಿಯಿಂದಾಗಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ತಡೆ ಹಿಡಿಯಲಾಗಿತ್ತು. ಆಗ ತಡೆ ಹಿಡಿಯಲಾಗಿದ್ದ 18 ತಿಂಗಳ ಡಿಎ ಬಾಕಿ ಪಾವತಿ ಬಜೆಟ್ ನಲ್ಲಿ ಘೋಷಣೆಯಾಗುವ ನಿರೀಕ್ಷೆ ಇದೆ.

ಇಷ್ಟೇ ಅಲ್ಲ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಬಜೆಟ್​​ನಲ್ಲಿ 8ನೇ ವೇತನ ಆಯೋಗದ ಮಾಹಿತಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಹೊಸ ವೇತನ ಆಯೋಗದ ಬದಲು ಖಾಸಗಿ ವಲಯದಲ್ಲಂತೂ ಪ್ರತಿ ವರ್ಷ ವೇತನ ಪರಿಷ್ಕರಣೆ ಮಾಡಲಾಗುವುದು. ವೇತನ ಹೆಚ್ಚಳವನ್ನು ಲೆಕ್ಕಾಚಾರ ಮಾಡಲು iCreot ಸೂತ್ರವನ್ನು ಬಳಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.


Spread the love

LEAVE A REPLY

Please enter your comment!
Please enter your name here