ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ಗುಡ್ ನ್ಯೂಸ್: ಗೌರವಧನ 2 ಸಾವಿರ ಹೆಚ್ಚಿಸಿದ ಸರ್ಕಾರ!

0
Spread the love

ಬೆಂಗಳೂರು :- ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ, PU ಕಾಲೇಜುಗಳ ಅತಿಥಿ ಶಿಕ್ಷಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದ್ದು, ಗೌರವಧನವನ್ನು 2 ಸಾವಿರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

Advertisement

ಪ್ರಸ್ತುತ ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ಮಾಡುವ ಅತಿಥಿ ಶಿಕ್ಷಕರಿಗೆ ₹10 ಸಾವಿರ, ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ ₹10,500 ಹಾಗೂ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ₹12 ಸಾವಿರ ನೀಡಲಾಗುತ್ತಿದೆ. 2025–26ನೇ ಶೈಕ್ಷಣಿಕ ಸಾಲಿನಿಂದ ಕ್ರಮವಾಗಿ ₹12 ಸಾವಿರ, ₹12,500 ಹಾಗೂ ₹14 ಸಾವಿರ ಪಡೆಯಲಿದ್ದಾರೆ.

ಈ ಹಿಂದೆ ಸರ್ಕಾರ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ 10,000 ರೂಪಾಯಿ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ 10,500 ಗೌರವ ಸಂಭಾವನೆ ನಿಗದಿಪಡಿಸಿತ್ತು. ಇದೀಗ ಈ ಮೊತ್ತಕ್ಕೆ ಹೆಚ್ಚುವರಿಯಾಗಿ 2,000 ರೂಪಾಯಿಗಳು ಸೇರ್ಪಡೆ ಆಗಿದೆ. ಪರಿಷ್ಕೃತ ಗೌರವ ಸಂಭಾವನೆಯು ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ 12,000 ರೂಪಾಯಿ ಸಿಗಲಿದೆ.

ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ 12,500 ರೂಪಾಯಿ ಸಿಗಲಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೂ 2,000 ಗಳಷ್ಟು ಗೌರವಧನ ಹೆಚ್ಚಳವಾಗಿದೆ.


Spread the love

LEAVE A REPLY

Please enter your comment!
Please enter your name here