KMF ಗ್ರಾಹಕರಿಗೆ ಗುಡ್‌ ನ್ಯೂಸ್: ಸೋಮವಾರದಿಂದ ಹೊಸ ದರ ಜಾರಿಗೆ! ಇಲ್ಲಿದೆ ಹೊಸ ದರ ಪಟ್ಟಿ

0
Spread the love

ಬೆಂಗಳೂರು: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (GST) ಸ್ಲ್ಯಾಬ್ ಪರಿಷ್ಕರಣೆ ಮಾಡಿದ ನಂತರ, ಕರ್ನಾಟಕದಲ್ಲಿ ಕೆಎಂಎಫ್ ನಂದಿನಿ ಉತ್ಪನ್ನಗಳ ಬೆಲೆ ಇಳಿಕೆ ಮಾಡುತ್ತಿದೆ. ಸೆಪ್ಟೆಂಬರ್ 22ರಿಂದ ಈ ಹೊಸ ದರ ಜಾರಿಗೆ ಬರುತ್ತದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಬೆಂಗಳೂರಿನಲ್ಲಿ ಮಾಹಿತಿ ನೀಡಿದ್ದಾರೆ.

Advertisement

ಗ್ರಾಹಕರಿಗೆ ಈ ದರ ಇಳಿಕೆ ದಸರಾ ಉಡುಗೊರೆ ನೀಡುವಂತೆ ಸಹ ಸಹಾಯಕವಾಗಿದೆ. ಇದೀಗ ಪರಿಷ್ಕೃತ ದರದ ವಿವರಗಳನ್ನು ಕೆಎಂಎಫ್ ಹಂಚಿಕೊಂಡಿದೆ. ನಂದಿನಿ ಹಾಲಿನ ಉತ್ಪನ್ನಗಳ ದರ ಮಾತ್ರ ಇಳಿಕೆಯಾಗಲಿದೆ. ಹಾಲು ಮತ್ತು ಮೊಸರಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಶಿವಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ನಂದಿನಿ ಹಾಲಿನ ಉತ್ಪನ್ನಗಳ ಹೊಸ ದರ ಪಟ್ಟಿ (ರೂಪಾಯಿಗಳಲ್ಲಿ)

ನಂದಿನಿ ತುಪ್ಪ (1000 ಮಿ.ಲಿ ಪೌಚ್)

  • 650 – ಹಳೆ ದರ
  • 610 – ಹೊಸ ದರ

ಬೆಣ್ಣೆ – ಉಪ್ಪುರಹಿತ (500 ಮಿ.ಲಿ)

  • 305- ಹಳೆ ದರ
  • 286- ಹೊಸ ದರ

ಪನೀರ್ (1000 ಗ್ರಾಂ)

  • 425 – ಹಳೆ ದರ
  • 408 – ಹೊಸ ದರ

ಗುಡ್ ಲೈಫ್ ಹಾಲು (1 ಲೀಟರ್)

  • 70 – ಹಳೆ ದರ
  • 68 – ಹೊಸ ದರ

ಚೀಸ್ (1 ಕೆಜಿ)

  • 480 – ಹಳೆ ದರ
  • 450 – ಹೊಸ ದರ

ಚೀಸ್ – ಸಂಸ್ಕರಿಸಿದ್ದು

  • 530- ಹಳೆ ದರ
  • 497- ಹೊಸ ದರ

ಐಸ್ ಕ್ರೀಮ್‌ಗಳು – ವೆನಿಲ್ಲಾ ಟಬ್ (1000- ಮಿ.ಗ್ರಾಂ)

  • 200- ಹಳೆ ದರ
  • 178- ಹೊಸ ದರ

ಐಸ್ ಕ್ರೀಮ್ ಫ್ಯಾಮಿಲಿ ಪ್ಯಾಕ್ (5000ಮಿ.ಲಿ)

  • 645- ಹಳೆ ದರ
  • 574- ಹೊಸ ದರ

ಐಸ್ ಕ್ರೀಮ್ ಚಾಕೊಲೇಟ್ ಸಂಡೇ (500ಮಿ.ಲಿ)

  • 115- ಹಳೆ ದರ
  • 102- ಹೊಸ ದರ

ಐಸ್ ಕ್ರೀಮ್ – ಮ್ಯಾಂಗೋ ನ್ಯಾಚುರಲ್ಸ್ (100 ಗ್ರಾ)

  • 35- ಹಳೆ ದರ
  • 31- ಹೊಸ ದರ

Spread the love

LEAVE A REPLY

Please enter your comment!
Please enter your name here