ವಾಹನ ಸವಾರರಿಗೆ ಗುಡ್ ನ್ಯೂಸ್: ಟ್ರಾಫಿಕ್ ಕಂಟ್ರೋಲ್ ಗೆ ಹೊಸ ಪ್ಲ್ಯಾನ್, ಈ ಸುದ್ದಿ ಮಿಸ್ ಮಾಡ್ದೆ ನೋಡಿ!

0
Spread the love

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಅದೇನು ಬದಲಾಗುತ್ತೊ ಗೊತ್ತಿಲ್ಲ. ಆದ್ರೆ ಟ್ರಾಫಿಕ್ ಪ್ರಾಬ್ಲಮ್ ಮಾತ್ರ ಬದಲಾಗಲ್ಲ. ಅದೆಷ್ಟೇ ಸರ್ಕಸ್ ಮಾಡಿದ್ರು, ಹೊಸ ಹೊಸ ಟೆಕ್ ನಾಲಾಜಿ ಬಳಸಿದ್ರು ನೋ ಯೂಸ್. ಇದೀಗ ಟ್ರಾಫಿಕ್ ಜಂಜಾಟಕ್ಕೆ ಬ್ರೇಕ್ ನೀಡೋಕೆ ಸಂಚಾರ ಪೊಲೀಸರೇ ಮತ್ತೊಂದು ಪ್ಲಾನ್ ಗೆ ಹೆಜ್ಜೆ ಹಾಕಿದ್ದಾರೆ.

Advertisement

ಐಟಿ ಬಿಟಿ ಸಿಟಿಯಲ್ಲಿ ವರ್ಷದಿಂದ ವರ್ಷಕ್ಕೆ ವಾಹನ ದಟ್ಟಣೆ, ಸಂಚಾರ ದಟ್ಟಣೆ ಹೆಚ್ಚಾಗ್ತಾನೆ ಇದೆ. ವಿಶ್ವದಲ್ಲೇ ಎರಡನೇ ಅತಿದೊಡ್ಡ ಸಂಚಾರ ದಟ್ಟಣೆಯ ಸಿಟಿ ಅನ್ನೋ ಅಪಖ್ಯಾತಿಗೆ ಒಳಗಾಗಿರುವ ಬೆಂಗಳೂರಿನ ಟ್ರಾಫಿಕ್ ಸಾಗರದ ಅಬ್ಬರಕ್ಕೆ ತಡೆಯೊಡ್ಡಲು, ಸಂಚಾರ ಪೊಲೀಸರು ಹಲವು ಹೊಸ ಹೊಸ ಉಪಕ್ರಮಗಳನ್ನು ಜಾರಿಗೆ ತರುತ್ತಿದ್ದಾರೆ.

ಟ್ರಾಫಿಕ್ ಜಾಮ್ ಕಂಟ್ರೋಲ್ ಮಾಡೋಕೆ ಸಂಚಾರ ಪೊಲೀಸರು ಮುಂದಾಗಿದ್ದು, ಹೊಸ ಹೊಸ ಉಪಕ್ರಮಗಳನ್ನು ಜಾರಿಗೊಳಿಸುತ್ತಿದ್ದಾರೆ. ಇದೀಗ ನಗರದ ಒಳಗೆ ಭಾರಿ ಸರಕು ವಾಹನ ಸಂಚಾರದ ಸಮಯದಲ್ಲಿ ಕೊಂಚ ಬದಲಾವಣೆ ಮಾಡಿದ್ದಾರೆ. ವಾರದ ಎಲ್ಲ ದಿನಗಳಲ್ಲಿ ಬೆಳಗ್ಗೆ 7 ರಿಂದ 11 ಮತ್ತು ಸಂಜೆ 4 ರಿಂದ 10ರವರೆಗೆ ಭಾರಿ ಸರಕು ವಾಹನಗಳು ಬೆಂಗಳೂರು ಮಹಾನಗರದ ಒಳಗಿನ ರಸ್ತೆಗಳಲ್ಲಿ ಸಂಚರಿಸುವಂತಿಲ್ಲ. ಆದರೆ, ಎಲ್ಲ ಶನಿವಾರಗಳಂದು ಬೆಳಗ್ಗೆ 10:30 ರಿಂದ ಮಧ್ಯಾಹ್ನ 2:30ರವರೆಗೆ ಹಾಗೂ ಸಂಜೆ 4:30 ರಿಂದ ರಾತ್ರಿ 9ಗಂಟೆಯವರೆಗೆ ನಿಷೇಧಿಸಲಾಗಿದೆ. ಈ ಹೊಸ ನಿಯಮ ಈಗಾಗಲೇ ಜಾರಿಯಾಗಿದೆ. ಇನ್ನುಳಿದಂತೆ ವಾರದ ಆರು ದಿನಗಳಲ್ಲಿ ಮೊದಲಿನಂತೆಯೇ ಮುಂದುವರೆಯಲಿದೆಯಂತೆ.

ಒಟ್ನಲ್ಲಿ ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಈ ನಿಯಮ ಯೂಸ್ ಆಗುತ್ತಾ ಅಥವಾ ಈ ನಿಯಮಕ್ಕೆ ವಿರೋಧ ವ್ಯಕ್ತವಾಗುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ.


Spread the love

LEAVE A REPLY

Please enter your comment!
Please enter your name here