ಕೇರಳ:- ಶಬರಿಮಲೆ ಭಕ್ತರಿಗೆ ಸಿಕ್ತು ಗುಡ್ ನ್ಯೂಸ್ ಸಿಕ್ಕಿದ್ದು, KSRTC ಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಅಯ್ಯಪ್ಪ ಭಕ್ತರ ಅನುಕೂಲಕ್ಕೆಂದು ಕೆಎಸ್‌ಆರ್‌ಟಿಸಿ ವೋಲ್ವೋ ಬಸ್ ಸೇವೆ ಪ್ರಾರಂಭ ಮಾಡಿದೆ. ಇದನ್ನು ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
ನವೆಂಬರ್ 29 ರಿಂದ ಹೊಸ ವೋಲ್ವೋ ಬಸ್ ಸಂಚಾರ ಆರಂಭವಾಗಲಿದೆ. ಇದು ಬೆಂಗಳೂರಿನಿಂದ ನೀಲಕ್ಕಲ್ (ಪಂಪಾ-ಶಬರಿಮಲೈ) ವರೆಗೆ ಓಡಾಟ ಮಾಡಲಿದೆ ಎಂದು ಕೆಎಸ್‌ಆರ್‌ಟಿಸಿ ಹೇಳಿದೆ. ನವೆಂಬರ್ 29 ರಂದು ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50 ಕ್ಕೆ ಹೊರಟು ಮರುದಿನ ಬೆಳಗ್ಗೆ 6.45 ಕ್ಕೆ ನೀಲಕ್ಕಲ್ ತಲುಪುತ್ತದೆ. ನಂತರ ನೀಲಕ್ಕಲ್‌ನಿಂದ ಸಂಜೆ 6 ಗಂಟೆಗೆ ಹೊರಡುವ ಬಸ್ ಮರುದಿವಸ ಬೆಳಗ್ಗೆ 10 ಗಂಟೆಗೆ ಬೆಂಗಳೂರು ತಲುಪಲಿದೆ.
ಪ್ರಯಾಣ ದರ ವಯಸ್ಕರರಿಗೆ ರೂ.1750 ನಿಗದಿಪಡಿಸಲಾಗಿದೆ.
ಕರ್ನಾಟಕದಿಂದ ಶಬರಿಮಲೆಗೆ ತೆರಳುವ ಭಕ್ತರ ಅನುಕೂಲಕ್ಕೆಂದು ರೈಲ್ವೆ ಇಲಾಖೆ ಮೂರು ತಿಂಗಳ ಕಾಲ ಈ ರೈಲು ಸಂಚರಿಸುವ ಕುರಿತು ಹೇಳಿದೆ. ಅದರ ಲಿಸ್ಟ್ ಈ ಕೆಳಗೆ ನೀಡಲಾಗಿದೆ. ಶಬರಿಮಲೆಗೆ ತೆರಳುವ ಭಕ್ತರು ಗಮನಿಸಿ.
ಕೊಚುವೇಲಿ-ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು (ಸಂಖ್ಯೆ 06083) ಕೊಚುವೇಲಿ ನಿಲ್ದಾಣದಿಂದ ನ.12 ರಿಂದ ಜನವರಿ 28 ವರಗೆ ಪ್ರತಿ ಮಂಗಳವಾರ ಸಂಜೆ 6.05ಕ್ಕೆ ಹೊರಟು, ಮರುದಿನ ದಿನ 10.55 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
ಎಸ್ಎಂವಿಟಿ ಬೆಂಗಳೂರು-ಕೊಚುವೇಲಿ ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು (ಸಂಖ್ಯೆ 06084) ಎಸ್ಎಂವಿಟಿ ಬೆಂಗಳೂರು ನಿಲ್ದಾಣದಿಂದ ನ.13 ರಿಂದ ಜನವರಿ 29ವರಗೆ ಪ್ರತಿ ಬುಧವಾರ ಇರಲಿದೆ. ಈ ರೈಲು ಮಧ್ಯಾಹ್ನ 12.45ಕ್ಕೆ ಹೊರಟು, ಮರುದಿನ ದಿನ ಬೆಳಗ್ಗೆ 6.45ಕ್ಕೆ ಕೊಚುವೇಲಿ ತಲುಪಲಿದೆ.
ಎಸ್ಎಂವಿಟಿ ಬೆಂಗಳೂರು-ಕೊಚುವೇಲಿ ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು (ಸಂಖ್ಯೆ 06084) ಎಸ್ಎಂವಿಟಿ ಬೆಂಗಳೂರು ನಿಲ್ದಾಣದಿಂದ ನ.13 ರಿಂದ ಜನವರಿ 29ವರಗೆ ಪ್ರತಿ ಬುಧವಾರ ಇರಲಿದೆ. ಈ ರೈಲು ಮಧ್ಯಾಹ್ನ 12.45ಕ್ಕೆ ಹೊರಟು, ಮರುದಿನ ದಿನ ಬೆಳಗ್ಗೆ 6.45ಕ್ಕೆ ಕೊಚುವೇಲಿ ತಲುಪಲಿದೆ.
ಈ ರೈಲು ಎರಡು ದಿಕ್ಕಿನ ಮಾರ್ಗದಲ್ಲಿ ಕೊಲ್ಲಂ, ಕಾಯಂಕುಳಂ, ಚೆಂಗನ್ನೂರ್, ಪಾಲಕ್ಕಾಡ್, ಪೊದನೂರ್, ಈರೋಡ್, ಸೇಲಂ, ಜೋಲಾರ್ ಪೆಟ್ಟಾಯ್ ಜಂಕ್ಷನ್‌ಗಳಲ್ಲಿ ನಿಲುಗಡೆ ಇರಲಿದೆ. ಶಬರಿಮಲೆಗೆ ತೆರಳುವ ಭಕ್ತರು ಚೆಂಗನ್ನೂರು ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಬಸ್ ಮೂಲಕ ಪಂಪಾಗೆ ತೆರಳಬಹುದು.