ಬೆಂಗಳೂರು: ಅಂತರ್ಜಾತಿ ವಿವಾಹಿತರ ರಕ್ಷಣೆಗೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ‘ಇವನಮ್ಮವ ಇವ ನಮ್ಮವ’ ಎಂಬ ಹೊಸ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದೆ.
ಅಂತರ್ಜಾತಿ ವಿವಾಹದ ಸಂದರ್ಭ ಕುಟುಂಬಸ್ಥರಿಂದ ಉಂಟಾಗುವ ವಿರೋಧ, ಸಾಮಾಜಿಕ ಬಹಿಷ್ಕಾರ ಮತ್ತು ಹಿಂಸೆ ಘಟನೆಗಳನ್ನು ತಡೆಯುವ ಉದ್ದೇಶದಿಂದ ಈ ಕಾಯ್ದೆ ತರಲು ಮುಂದಾಗಿದೆ. ಈ ವಿಧೇಯಕ ಜಾರಿಗೆ ಬಂದರೆ ಅಂತರ್ಜಾತಿ ವಿವಾಹಕ್ಕೆ ಹೆಚ್ಚಿನ ಕಾನೂನುಬದ್ಧ ರಕ್ಷಣೆ ಸಿಗಲಿದೆ.
ವಿಧೇಯಕದ ಪ್ರಮುಖ ಅಂಶಗಳು:
-
ಅಂತರ್ಜಾತಿ ವಿವಾಹ ಮಾಡಿದ ದಂಪತಿಗಳಿಗೆ ಸಾಮಾಜಿಕ, ಆರ್ಥಿಕ ಬಹಿಷ್ಕಾರ ವಿಧಿಸುವುದು ಅಪರಾಧ
-
ದಂಪತಿಯನ್ನು ಮನೆ ಬಿಟ್ಟು ಹೋಗುವಂತೆ ಒತ್ತಾಯಿಸುವುದು ಕಾನೂನುಬಾಹಿರ
-
ಜಾತಿ ಅಥವಾ ಸಂಪ್ರದಾಯದ ಹೆಸರಿನಲ್ಲಿ ಹಿಂಸೆ, ಕಿರುಕುಳಕ್ಕೆ ಕಟ್ಟುನಿಟ್ಟಿನ ನಿಷೇಧ
-
ಪೂಜಾ ಸ್ಥಳಗಳಿಗೆ ಪ್ರವೇಶ ನಿರಾಕರಣೆ ಮಾಡುವಂತಿಲ್ಲ
-
ಆಸ್ತಿ ಕಳೆದುಕೊಳ್ಳುವಂತೆ ಒತ್ತಡ ಹಾಕುವುದು ಅಪರಾಧ
-
ಉದ್ಯೋಗಕ್ಕೆ ಅಡ್ಡಿಪಡಿಸುವುದು, ಅವಕಾಶ ನಿರಾಕರಿಸುವುದು ಕಾನೂನುಬಾಹಿರ
-
ವಯಸ್ಕರ ವಿವಾಹಕ್ಕೆ ಪೋಷಕರ ಅನುಮತಿ ಅಗತ್ಯವಿಲ್ಲ
-
ದಂಪತಿಗೆ ಮಾನಸಿಕ, ದೈಹಿಕ ಹಿಂಸೆ ನೀಡುವುದು ಅಪರಾಧ
-
ಕಿಡ್ನ್ಯಾಪ್, ಬಲವಂತವಾಗಿ ಬೇರ್ಪಡಿಸುವುದು ಕಾನೂನುಬಾಹಿರ
-
ಸಹಾಯ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ
-
ಬ್ಯಾಂಕ್ ಖಾತೆ ಸ್ಥಗಿತಗೊಳಿಸುವುದು ಅಥವಾ ಒತ್ತಡ ಹೇರುವುದು ಅಪರಾಧ
-
ಲೈಂಗಿಕ ಹಿಂಸೆ, ಬಲವಂತದ ಗರ್ಭಪಾತಕ್ಕೆ ಕಠಿಣ ಶಿಕ್ಷೆ
-
ಮರ್ಯಾದಾ ಹತ್ಯೆಗೆ 5 ವರ್ಷ ಜೈಲು ಮತ್ತು ದಂಡ
-
ದಂಪತಿಗೆ ಬೆದರಿಕೆ ಹಾಕಿದರೆ 5ರಿಂದ 7 ವರ್ಷಗಳವರೆಗೆ ಶಿಕ್ಷೆ
-
ಸಾಕ್ಷಿಗಳ ಗುರುತು, ವಿಳಾಸ ರಹಸ್ಯವಾಗಿರಬೇಕು
ಈ ವಿಧೇಯಕದಲ್ಲಿ ಕಠಿಣ ಶಿಕ್ಷೆಗಳನ್ನೂ ಒಳಗೊಂಡಿರುವುದರಿಂದ, ಅಂತರ್ಜಾತಿ ವಿವಾಹಿತ ಜೋಡಿಗಳಿಗೆ ಭದ್ರತೆ ಮತ್ತು ಕಾನೂನುಬದ್ಧ ಬೆಂಬಲ ಒದಗಿಸುವ ಉದ್ದೇಶ ಹೊಂದಿದೆ.



