ವಿಷ್ಣುವರ್ಧನ್ ಪುಣ್ಯಭೂಮಿಯನ್ನು ಬಾಲಣ್ಣ ಕುಟುಂಬದ ಸದಸ್ಯರು ನೆಲಸಮಗೊಳಿಸಿದ್ದರು. ಕನ್ನಡ ಚಿತ್ರರಂಗದ ಮೇರು ನಟನ ಸಮಾಧಿ ನೆಲಸಮವಾಗಿರುವುದು ಚಿತ್ರರಂಗಕ್ಕೆ ಆಘಾತ ತಂದಿತ್ತು.. ವಿಷ್ಣುವರ್ಧನ್ ಅಭಿಮಾನಿಗಳು ಸಹ ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದರು.
ಇದೀಗ ಅಭಿಮಾನ್ ಸ್ಟುಡಿಯೋ ಹಾಗೂ ವಿಷ್ಣುವರ್ಧನ್ ಸಮಾಧಿಯೂ ಇದ್ದ ಜಾಗವನ್ನು ಈಗ ಸರ್ಕಾರವು ಅರಣ್ಯ ಪ್ರದೇಶ ಎಂದು ಆದೇಶ ಹೊರಡಿಸಿದೆ.ಈ ಕುರಿತಂತೆ ಆದೇಶ ಹೊರಡಿಸಲಾಗಿದೆ. ಇಡೀ ಜಾಗವನ್ನು ಅರಣ್ಯ ಪ್ರದೇಶವೆಂದು ಘೋಷಿಸಿರುವ ಕಾರಣ ಅಭಿಮಾನ್ ಸ್ಟುಡಿಯೋದ ಜಮೀನನ್ನು ಸರ್ಕಾರ ಮತ್ತೆ ವಾಪಸ್ ಪಡೆಯಲು ತಯಾರಿ ಮಾಡಿಕೊಂಡಿದೆ.
ಬಾಲಕೃಷ್ಣ ಅಥವಾ ಬಾಲಣ್ಣ ಅವರಿಗೆ ಸರ್ಕಾರ ಸಿನಿಮಾ ಉದ್ದೇಶಕ್ಕೆ ಬಳಕೆ ಮಾಡಲು ಲೀಸ್ ಗೆ ಹಾಗೂ ಇತರೆ ನಿಮಯಗಳ ಅಡಿಯಲ್ಲಿ 20 ಎಕರೆ ಭೂಮಿ ನೀಡಲಾಗಿತ್ತು. ಆದರೆ ಬಾಲಣ್ಣ ಅವರು ಹೋದ ಮೇಲೆ ಅವರ ಮಕ್ಕಳು ಸುಮಾರು ಹನ್ನೆರಡು ಎಕರೆಯನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ಜೊತೆಗೆ ನಿಯಮದಂತೆ ಸ್ಟುಡಿಯೋ ಅಭಿವೃದ್ಧಿ ಕಾರಣಕ್ಕೆ ಈ ಜಮೀನನ್ನು ಮಾರಾಟ ಮಾಡಲಾಗಿದೆ ಎಂದು ಅವರ ಕುಟುಂಬದವರು ಹೇಳುತ್ತಿದ್ದರಾದರೂ ಬಾಲಣ್ಣ ಅವರ ಸಹೋದರಿಯವರು ಹೇಳುವಂತೆ ಬಾಲಣ್ಣ ಅವರ ಮೊಮ್ಮಕ್ಕಳು ಇದನ್ನು ಸ್ವಾರ್ಥಕ್ಕೆ ಬಳಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ.ಪರಿಣಾಮ ನಿಯಮವನ್ನು ಉಲ್ಲಂಘಟನೆ ಮಾಡಿದ ಕಾರಣಕ್ಕೆ ದಂಡದ ರೂಪವಾಗಿ ಸರ್ಕಾರದ ಸುಪರ್ದಿಗೆ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.