KSRTC ಯಿಂದ ದೀಪಾವಳಿ ಹಬ್ಬಕ್ಕೆಂದು ಊರಿಗೆ ಹೋಗೋರಿಗೆ ಗುಡ್ ನ್ಯೂಸ್

0
Spread the love

ಬೆಂಗಳೂರು;- ಊರಿಗೆ ಹೋಗೋರಿಗೆ ದೀಪಾವಳಿ ಪ್ರಯುಕ್ತ KSRTC ಗುಡ್ ನ್ಯೂಸ್ ನೀಡಿದೆ. ಪ್ರಯಾಣಿಕರ ಅನಕೂಲಕ್ಕಾಗಿ ಬೆಂಗಳೂರಿನಿಂದ ಎಲ್ಲಾ ಜಿಲ್ಲೆಗಳಿಗೂ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ನವೆಂಬರ್ 10ರಿಂದ ಎರಡು ಸಾವಿರ ಹೆಚ್ಚುವರಿ ಬಸ್‌ಗಳ ಸಂಚರಿಸಲಿವೆ.

Advertisement

ಕಳೆದ ವಾರ ದಸರಾ ಹಿನ್ನೆಲೆ ಹೆಚ್ಚುವರಿ ಬಸ್‌ಗಳನ್ನ ಬಿಡಲಾಗಿತ್ತು. ಅದರಿಂದ ಸಾರಿಗೆ ಇಲಾಖೆಗೆ ಕೋಟಿ ಕೋಟಿ ಆದಾಯ ಹರಿದು ಬಂದಿತ್ತು. ಇದೀಗ ಮತ್ತೆ ಹಬ್ಬಕ್ಕೆ ಹೆಚ್ಚುವರಿ ಬಸ್‌ಗಳನ್ನ ಬಿಟ್ಟು ಲಾಭ ಪಡೆಯೋಕೆ ಸಾರಿಗೆ ಇಲಾಖೆ ಮುಂದಾಗಿದೆ. ಹೆಚ್ಚುವರಿ ಬಸ್ ಬಿಡೋದಾಗಿ ಸಾರಿಗೆ ನಿಗಮವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

12.11.2023 ರಂದು ನರಕ ಚತುರ್ದಶಿ ಹಾಗೂ ದಿನಾಂಕ: 14.11.2023 ರಂದು ಬಲಿಪಾಡ್ಯಮಿ ಹಬ್ಬ ಇದೆ.ಹೀಗಾಗಿ ಎಡದು ದಿನ ಮುಂಚೆನೇ ಪ್ರಯಾಣಿಕರು ಊರುಗಳಿಗೆ ತೆರಳುತ್ತಾರೆ.ಇದೆ 10ನೇ ತಾರೀಕಿನಿಂದ ಬಸ್ ಗಳು ಬಿಡಲಾಗುತ್ತೆ.ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ದಿನಾಂಕ: 14.11.2023 ಹಾಗೂ 15.11.2023 ರಂದು ವಿಶೇಷ ವಾಹನಗಳನ್ನು ಬಿಡಲಾಗುತ್ತೆ.

ಮುಂಗಡ ಟಿಕೆಟ್ ಬುಕಿಂಗ್ ವ್ಯವಸ್ಥೆ ಕೂಡ ಮಾಡಿಕೊಡಲಾಗಿದೆ.ಮುಂಗಡ ಟಿಕೆಟ್ ಬುಕಿಂಗ್ ಮಾಡೋರಿಗೆ ರಿಯಾಯಿತಿ ಕೊಡಲಾಗುತ್ತೆ.ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಕಾಯ್ದಿರಿಸಿದಲ್ಲಿ ಶೇಕಡ 5 ರಷ್ಟು ರಿಯಾಯಿತಿ ನೀಡಲಾಗುವುದು.ಹೋಗುವ & ಬರುವ ಪ್ರಯಾಣದ ಟಿಕೇಟ್‌ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುವುದು


Spread the love

LEAVE A REPLY

Please enter your comment!
Please enter your name here