ಬೆಂಗಳೂರು:- ಪೀಣ್ಯ ಮೇಲ್ಸೇತುವೆ ಇಂದಿನಿಂದ ಸಂಚಾರ ಮುಕ್ತವಾಗ್ತಾಯಿದೆ. ಸುಮಾರು 25 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಫ್ಲೈ ಓವರ್ ವಾಹನಗಳ ಓಡಾಟಕ್ಕೆ ಮುಕ್ತ ಆಗ್ತಾಯಿದ್ದು, ಟ್ರಾಫಿಕ್ ಕಿರಿಕಿರಿಗೆ ಬ್ರೇಕ್ ಬೀಳೋದು ಪಕ್ಕಾ ಎನ್ನಲಾಗಿದೆ.
2 ವರ್ಷಗಳಿಂದ ಭಾರೀ ವಾಹನಗಳಿಗೆ ಕ್ಲೋಸ್ ಆಗಿದ್ದ ಬೆಂಗಳೂರು ನಗರದ ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆ ಇಂದಿನಿಂದ ಎಲ್ಲ ಮಾದರಿ ವಾಹನಗಳ ಸಂಚಾರಕ್ಕೆ ಮುಕ್ತವಾಗ್ತಿದೆ. ಬೆಂಗಳೂರಿನಿಂದ 25 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು- ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆ ಭಾರೀ ವಾಹನಗಳ ಸಂಚಾರಕ್ಕೆ ಮುಕ್ತವಾಗ್ತಿದೆ.
ಇಂದಿನಿಂದ ಪೀಣ್ಯ ಮೇಲ್ಸೇತುವೆಯಲ್ಲಿ ಎಲ್ಲ ಮಾದರಿ ವಾಹನ ಸಂಚಾರ ಆರಂಭವಾಗಲಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾಹನ ಸವಾರರಿಗೆ ಹಲವು ಸೂಚನೆ ನೀಡಿದೆ. ಇನ್ಮುಂದೆ ಬೆಳಗ್ಗೆ, ರಾತ್ರಿ ನಗರ ಪ್ರವೇಶ ಮತ್ತು ನಿರ್ಗಮನಕ್ಕೆ ಮೇಲ್ಸೇತುವೆ ಅನೂಕೂಲವಾಗಲಿದೆ. ಇದರಿಂದ ಟ್ರಾಫಿಕ್ ಸಮಸ್ಯೆಗೂ ಮುಕ್ತಿ ಸಿಗಲಿದೆ. ಪ್ರತಿ ಶುಕ್ರವಾರ ಫ್ಲೈಓವರ್‌ನ ನಿರ್ವಹಣೆ, ಪರಿಶೀಲನೆ ಆಗಲಿದ್ದು, ಆ ದಿನ ವಾಹನಗಳ ಸಂಚಾರಕ್ಕೆ ನಿರ್ಬಂಧ ಇರಲಿದೆ