IPL 2025: RCB ಫ್ಯಾನ್ಸ್ ಗೆ ಗುಡ್ ನ್ಯೂಸ್: ತಂಡಕ್ಕೆ ಸ್ಫೋಟಕ ದಾಂಡಿಗ ಎಂಟ್ರಿ!

0
Spread the love

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ತಂಡಕ್ಕೆ ಸ್ಪೋಟಕ ಆಟಗಾರ ಎಂಟ್ರಿ ಕೊಟ್ಟಿದ್ದಾರೆ. ಆರ್​ಸಿಬಿ ತಂಡದ ಮುಂದಿನ ಪಂದ್ಯಗಳಿಂದ ಯುವ ದಾಂಡಿಗ ಜೇಕಬ್ ಬೆಥೆಲ್ ಹೊರಗುಳಿಯುವುದು ಖಚಿತವಾಗಿದೆ. ಹೀಗಾಗಿ ಬದಲಿ ಆಟಗಾರನಾಗಿ ಸೈಫರ್ಟ್ ಅವರನ್ನು ಆಯ್ಕೆ ಮಾಡಲಾಗಿದೆ.

Advertisement

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಆಯ್ಕೆ ಮಾಡಲಾದ ಇಂಗ್ಲೆಂಡ್ ತಂಡದಲ್ಲಿ ಜೇಕಬ್ ಬೆಥೆಲ್ ಸ್ಥಾನ ಪಡೆದಿದ್ದು, ಹೀಗಾಗಿ ಮೇ 26ರ ಬಳಿಕ ಅವರು ಇಂಗ್ಲೆಂಡ್​ಗೆ ಮರಳಲಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಬದಲಿಯಾಗಿ ಟಿಮ್ ಸೈಫರ್ಟ್ ಅವರನ್ನು ಆರ್​ಸಿಬಿ ಆಯ್ಕೆ ಮಾಡಿಕೊಂಡಿದೆ.

ಟಿಮ್ ಸೈಫರ್ಟ್​ ನ್ಯೂಝಿಲೆಂಡ್​ನ ವಿಕೆಟ್ ಕೀಪರ್ ಬ್ಯಾಟ್ಸ್​ಮನ್. ಕಿವೀಸ್ ಪರ ಈವರೆಗೆ 66 ಟಿ20 ಪಂದ್ಯಗಳನ್ನಾಡಿರುವ ಸೈಫರ್ಟ್ 63 ಇನಿಂಗ್ಸ್​ಗಳಿಂದ 1540 ರನ್ ಕಲೆಹಾಕಿದ್ದಾರೆ. ಇದರ ನಡುವೆ 10 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ ಟಿ20ಐ ಕ್ರಿಕೆಟ್​ನಲ್ಲಿ ಟಿಮ್ ಸೈಫರ್ಟ್ ಬ್ಯಾಟ್​ನಿಂದ ಈವರೆಗೆ 80 ಸಿಕ್ಸ್ ಹಾಗೂ 131 ಫೋರ್​ಗಳು ಮೂಡಿಬಂದಿವೆ.

ಸದ್ಯ ಆರ್​ಸಿಬಿ ತಂಡದ ಭಾಗವಾಗಿರುವ ಟಿಮ್ ಸೈಫರ್ಟ್ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ 3 ಐಪಿಎಲ್ ಪಂದ್ಯಗಳನ್ನಾಡಿರುವ ಅವರು 26 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಈ ಬಾರಿ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ಬದಲಿ ಆಟಗಾರನಾಗಿ ಸ್ಥಾನ ಪಡೆಯುವಲ್ಲಿ ಕಿವೀಸ್ ದಾಂಡಿಗ ಯಶಸ್ವಿಯಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here