IPL 2025: RCB ಫ್ಯಾನ್ಸ್ ಗೆ ಗುಡ್ ನ್ಯೂಸ್: ತಂಡಕ್ಕೆ ಝಿಂಬಾಬ್ವೆ ವೇಗಿ ಎಂಟ್ರಿ!?

0
Spread the love

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ತಯಾರಿಗಾಗಿ ಸೌತ್ ಆಫ್ರಿಕಾ ಆಟಗಾರರು ಮೇ 26 ರಂದು ತವರಿಗೆ ತೆರಳಲಿದ್ದಾರೆ. ಹೀಗಾಗಿ ಲುಂಗಿ ಎನ್​ಗಿಡಿ ಆರ್​ಸಿಬಿ ತಂಡದ ಪ್ಲೇಆಫ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

Advertisement

ಇತ್ತ ಲುಂಗಿ ಎನ್​ಗಿಡಿ ಹೊರಗುಳಿಯುವುದು ಖಚಿತವಾಗುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬದಲಿ ಆಟಗಾರನನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ ಆರ್​ಸಿಬಿ ತಂಡದ ಪ್ಲೇಆಫ್ ಪಂದ್ಯಗಳಿಗೆ ಝಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಝರಬಾನಿ ಆಯ್ಕೆಯಾಗಿದ್ದಾರೆ.

ಬ್ಲೆಸಿಂಗ್ ಮುಝರಬಾನಿ ಝಿಂಬಾಬ್ವೆ ಪರ ಈವರೆಗೆ 70 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 1449 ಎಸೆತಗಳನ್ನು ಎಸೆದಿರುವ ಅವರು 78 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಅದು ಕೂಡ ಕೇವಲ 7.03 ರನ್ ಎಕಾನಮಿ ರೇಟ್​ನಲ್ಲಿ ಎಂಬುದು ವಿಶೇಷ. ಹೀಗಾಗಿಯೇ ಇದೀಗ ಬ್ಲೆಸಿಂಗ್ ಮುಝರಬಾನಿ ಅವರನ್ನು ಲುಂಗಿ ಎನ್​ಗಿಡಿ ಬದಲಿಯಾಗಿ ಆರ್​ಸಿಬಿ ಮಾಡಿಕೊಂಡಿದೆ.

ಇನ್ನು ಆರ್​ಸಿಬಿ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯಲಿದೆ. ಮೇ 23 ರಂದು ನಡೆಯಲಿರುವ ಈ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಾದ ಬಳಿಕ ಆರ್​ಸಿಬಿ ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.


Spread the love

LEAVE A REPLY

Please enter your comment!
Please enter your name here