ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಅಡವಿಸೋಮಾಪುರ ಗ್ರಾಮದ ಸರಕಾರಿ ಶಾಲೆಯ ವಿದ್ಯಾರ್ಥಿನಿ ಪವಿತ್ರಾ ಕೃಷ್ಣಪ್ಪ ಖಾನಾಪುರ 589 ಅಂಕಗಳನ್ನು ಪಡೆದು ಶೇ. 94.34 ಫಲಿತಾಂಶದೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಇದೇ ಶಾಲೆಯ ಭಾಗ್ಯ ಜಗ್ಗಲ-572 ಅಂಕ(ಶೇ. 91.52)ಗಳೊಂದಿಗೆ ದ್ವೀತಿಯ ಹಾಗೂ ಶಹನಾಜಬೇಗಂ ಲಕ್ಕುಂಡಿ-565 ಅಂಕ(ಶೇ. 90.40)ಗಳೊಂದಿಗೆ ತೃತೀಯ ಸ್ಥಾನ ಪಡೆಯುವ ಮೂಲಕ ಅಡವಿಸೋಮಾಪುರ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಸಾಧಕ ವಿದ್ಯಾರ್ಥಿಗಳಿಗೆ ಅಡವಿಸೋಮಾಪೂರದ ಶ್ರೀ ಕನಕದಾಸ ವಿವಿಧೋದ್ದೇಶಗಳ ಟ್ರಸ್ಟ್ನ ಅಧ್ಯಕ್ಷ ಮಂಜುನಾಥ ಜಡಿ ಮೌರ್ಯ, ಉಪಾಧ್ಯಕ್ಷ ಈರಪ್ಪ ಹೊಸಳ್ಳಿ, ಕಾರ್ಯದರ್ಶಿ ಪ್ರಕಾಶ ಖಾನಾಪುರ, ತುಳಸಪ್ಪ ನಾವಳ್ಳಿ, ಕೃಷ್ಣಪ್ಪ ಖಾನಾಪೂರ ಸೇರಿದಂತೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.



