ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಬಿಸಿಎನ್ ವಿದ್ಯಾಸಂಸ್ಥೆಯ ಬಿಸಿಎನ್ ವಿಜನ್ ಪ.ಪೂ ಕಾಲೇಜಿನ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಶ್ವೇತಾ ಕೊಕ್ಕಿನವರ ಶೇ.95, ಸಾನಿಯಾ ಸೊರಟೂರ ಶೇ.94, ಕೀರ್ತಿ ನಿಂಗನಗೌಡ್ರ ಶೇ.93, ಈಶ್ವರಿ ಅಂಗಡಿ ಶೇ.92, ಶ್ರೇಷ್ಠಾ ನವಲೆ ಶೇ.91.33, ಕಾವ್ಯಾ ಸೊರಟೂರ ಶೇ.91, ಆಲಿಯಾ ಆಡೂರ ಶೇ. 91, ವೆಂಕಟೇಶ ಕಾರಬಾರಿ ಶೇ.91 ಅಂಕ ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸ್ಪೂರ್ತಿ ಸಾಲಮನಿ ಶೇ.94, ಅನೂಷಾ ಬಡಿಗೇರ ಶೇ.90, ಗೌರಮ್ಮ ಹಿತ್ತಲಮನಿ ಶೇ.90, ಮನೋಹರಿ ಬೆಲ್ಲದ ಶೇ.86 ಅಂಕ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ಫಕ್ಕಿರಮ್ಮ ಗಿಡ್ರಾಹುತ್ ಶೇ.90, ಶೈಲಾ ಕುಂಬಾರ ಶೇ.88 ಅಂಕ ಪಡೆದುಕೊಂಡಿದ್ದಾರೆ.
ಕಾಲೇಜಿನ ವಿದ್ಯಾರ್ಥಿನಿ ಈಶ್ವರಿ ಅಂಗಡಿ ಕನ್ನಡ ಮತ್ತು ಗಣಿತ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದಾಳೆ. ಶ್ವೇತಾ ಕೊಕ್ಕಿನವರ, ಶ್ರೇಷ್ಠಾ ನವಲೆ ಕನ್ನಡದಲ್ಲಿ 99 ಅಂಕಗಳನ್ನು ಗಳಿಸಿದ್ದಾರೆ. ಅಲ್ಲದೆ ಅನೇಕ ವಿದ್ಯಾರ್ಥಿಗಳು ಗಣಿತ, ಕನ್ನಡ ಮತ್ತು ಲೆಕ್ಕಶಾಸ್ತ್ರ ವಿಷಯಗಳಲ್ಲಿ 99 ಮತ್ತು 98 ಅಂಕಗಳನ್ನು ಗಳಿಸಿರುವುದು ವಿಶೇಷ ಸಾಧನೆಯಾಗಿದೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ನೆಲವಿಗಿ, ಕಾರ್ಯದರ್ಶಿ ಲೋಹಿತ್ ನೆಲವಿಗಿ, ನಿರ್ದೇಶಕ ನಾಗರಾಜ ಕುಲಕರ್ಣಿ, ಪ್ರಾಚಾರ್ಯರುಗಳಾದ ಮಂಜುನಾಥ ಬಂಡಿವಾಡ, ಡಿ.ಎಸ್. ಪ್ಯಾಟಿ ಮತ್ತು ಉಪನ್ಯಾಸಕರು, ಸಿಬ್ಬಂದಿಗಳು ಅಭಿನಂದಿಸಿದ್ದಾರೆ.