ವಿಜಯಸಾಕ್ಷಿ ಸುದ್ದಿ, ರೋಣ: ಪಟ್ಟಣದ ಎಲ್.ಐ. ದಿಂಡೂರ ಆಂಗ್ಲ ಮಾಧ್ಯಮ ಶಾಲೆಯು ಶೇ.100 ಫಲಿತಾಂಶವನ್ನು ಗಳಿಸಿದೆ. ಶಾಲೆಯ 12 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, 34 ಪ್ರಥಮ ಶ್ರೇಣಿಯಲ್ಲಿ ಹಾಗೂ 2 ವಿದ್ಯಾರ್ಥಿಗಳು ದ್ವಿತೀಯ ಶೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ.
Advertisement
ಶಾಲೆಗೆ ಕಾವ್ಯಾ ಪುರದ 613 ಅಂಕಗಳೊAದಿಗೆ (ಶೇ.98.8) ಪ್ರಥಮ ಸ್ಥಾನ, ಜಮೀಲಾಬೇಗಮ್ ಮುಲ್ಲಾ 602 (ಶೇ. 96.32) ಅಂಕಗಳೊಂದಿಗೆ ದ್ವಿತೀಯ ಸ್ಥಾನ, ಶ್ರೇಯಾ ಪಟ್ಟಣಶೆಟ್ಟಿ
601 (ಶೇ. 96.16) ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಸಾಧಕ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಶಶಿಧರ ಎಲ್.ದಿಂಡೂರ, ಶಾಲೆಯ ಆಡಳಿತ ಮಂಡಳಿ ಸದಸ್ಯರು ಶುಭ ಹಾರೈಸಿದ್ದಾರೆ.