ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗಂಗಿಮಡಿ ರಸ್ತೆಯ ತಾಜ್‌ನಗರ ಬಳಿ ಮಾಜಿ ನಗರಸಭೆ ನಾಮನಿರ್ದೇಶಕ ಸದಸ್ಯ ಚಾಂದ್‌ಸಾಬ ಕೊಟ್ಟೂರ ಮಾಲೀಕತ್ವದ ಕೊಟ್ಟೂರ ಟ್ರೇಡರ್ಸ್ ಮಳಿಗೆಯನ್ನು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲರನ್ನು ಸನ್ಮಾನಿಸಲಾಯಿತು. ಮನೆ ಕಟ್ಟಲು ಅಗತ್ಯವಿರುವ ಬ್ಲಾಕ್ ಇಟ್ಟಿಗೆ, ವಿವಿಧ ಕಂಪನಿಗಳ ಸಿಮೆಂಟ್ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಈ ಒಂದೇ ಮಳಿಗೆಯಲ್ಲಿ ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ.
ಈ ಸಂದರ್ಭದಲ್ಲಿ ಶಾಂತಣ್ಣ ಮುಳವಾಡ, ಬಿ.ಬಿ. ಅಸೂಟಿ, ಬರಕತಅಲಿ ಮುಲ್ಲಾ, ಆರಿಫ್ ಹುನಗುಂದ, ಯೂಸುಫ್ ಕೊಟ್ಟೂರು, ಕೆ.ಆರ್. ಸುಣ್ಣಗಾರ್, ಜಹೀರ್ ಅಬ್ಬಾಸ್, ಎಂ.ಕೊಪ್ಪಳ, ಮೌಲಾನ ಅಂಜಲ್ ಹುಸೇನ್, ಡಾ. ಮಸೂತಿಮನಿ, ರೆಹಮಾನ್‌ಸಾಬ್ ದಂಡಿನ್, ಸೈಯದ್ ಇಸ್ಮಾಯಿಲ್ ರಿಹಾನ್ ಕೊಟ್ಟೂರ್, ಹಿಡ್ಕಿಮಠ ಗುರುಗಳು, ಜೂನ್‌ಸಾಬ ಉಮಚಗಿ, ಅಸ್ಲಂ ಜಮಾಲ್‌ಖಾನ್, ಪ್ರದೀಪ್ ಚವಡಿ ಮುಂತಾದವರು ಉಪಸ್ಥಿತರಿದ್ದರು.