ವಿಜಯಸಾಕ್ಷಿ ಸುದ್ದಿ, ಗದಗ : ಕಪ್ಪತ್ತಗಿರಿ ಫೌಂಡೇಶನ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆಯ ಗದಗ ಜಿಲ್ಲಾ ವತಿಯಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಮಹಾಂತೇಶ ಬೇರಗಣ್ಣವರ ಅವರ ಕೃತಿ ಲೋಕರ್ಪಣೆ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಮಹಾಂತೇಶ ಬೇರಗಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ, ಕಪ್ಪತ್ತಗಿರಿ ಸಂಸ್ಥೆಯು ಸಾಗಿ ಬಂದ ಹಾದಿ ಮತ್ತು ಗುರಿ ಧ್ಯೇಯೋದ್ದೇಶಗಳನ್ನು ತಿಳಿಸುತ್ತ, ಸ್ಥಾಪನೆಯಾದ ಕೆಲವೇ ವರ್ಷಗಳಲ್ಲಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಹಲವಾರು ಕವಿ-ಕಲಾವಿದರನ್ನು ಗುರುತಿಸಿ ಗೌರವಿಸಿ ಮುಖ್ಯ ವಾಹಿನಿಗೆ ಪರಿಚಯಿಸಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ರಮೇಶ ಸಿದ್ದಪ್ಪ ನಾಯಕ ಮಾತನಾಡಿ, ಕಪ್ಪತ್ತಗಿರಿ ಫೌಂಡೇಶನ್ ಮೂಲಕ ಮಹಿಳೆಯೊಬ್ಬರು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಇಷ್ಟೆಲ್ಲಾ ಕಾರ್ಯಚಟುವಟಿಕೆ ಮಾಡುತ್ತಾರೆಂದರೆ ನಾವೆಲ್ಲರೂ ಅವರಿಗೆ ಕೈ ಜೋಡಿಸಬೇಕು ಎಂದು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ ಕೆ.ಎ. ಬಳಿಗೇರ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಇರುವ ಶಿಕ್ಷಕರ ಸವಾಲಿನ ಬಗ್ಗೆ ಮಾತನಾಡಿದರು.
ಮಹಾಂತೇಶ ಬೇರಗಣ್ಣವರ ಅವರ `ಹೇಳ್ದವ್ರ ಮಾತು ಯಾರ್ ಕೇಳ್ತಾರೀಗ’ ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ವಸ್ತçದ, ಅಶ್ವಿನಿ ಬಾದಾಮಿ, ಅಧ್ಯಕ್ಷತೆ ವಹಿಸಿದ್ದ ಚಂದ್ರಕಲಾ ಎಂ. ಇಟಗಿಮಠ ಮಾತನಾಡಿದರು.
ಓಂಕಾರ ಗಿರಿಯ ಪಟ್ಟಾಧ್ಯಕ್ಷರಾದ ಶ್ರೀ ನಿ.ಪ್ರ. ಪಕ್ಕಿರೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿ ಶುಭ ಹಾರೈಸಿದರು. ಸೌಮ್ಯ ಹಿರೇಮಠ ಸ್ವಾಗತಿಸಿದರು. ಕವಿತಾ ಗುಜಮಾಗಡಿ ಪ್ರಾರ್ಥಿಸಿದರು. ಪುಸ್ತಕ ಬಿಡುಗಡೆಯನ್ನು ಬಾಳವ್ವ ಧರ್ಮಟ್ಟಿ ಮಾಡಿದರು. ಈಶ್ವರ ಕುರಿ ಕಾರ್ಯಕ್ರಮ ನಿರ್ವಹಿಸಿದರು. ನಾಗರತ್ನ ಹೊಸಮನಿ, ತೋಟಯ್ಯ ಗುಡ್ಡಿಮಠ, ಸ್ವಪ್ನಾ ಹಿರೇಮಠ, ರಾಜೇಶ್ವರಿ ಗುಡ್ಡಿಮಠ ನಿರ್ವಹಿಸಿದರು. ಶಿವಲೀಲಾ ಧನ್ನಾ ವಂದಿಸಿದರು.