HomeGadag News`ಅಮ್ಮ ಫೌಂಡೇಶನ್'ನಿಂದ ಉತ್ತಮ ಕಾರ್ಯಗಳಾಗಲಿ

`ಅಮ್ಮ ಫೌಂಡೇಶನ್’ನಿಂದ ಉತ್ತಮ ಕಾರ್ಯಗಳಾಗಲಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಬೆಂಗಳೂರಿನ ಅಮ್ಮ ಫೌಂಡೇಶನ್ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇಲ್ಲಿನ ಸೇವಾಲಾಲ ನಗರದ ರೋಟರಿ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರಿ ಸಿದ್ದರಾಮ ದೇವರು ಮಣಕವಾಡ ಆಶೀರ್ವಚನ ನೀಡಿ, ಅಮ್ಮ ಫೌಂಡೇಶನ್‌ನಿಂದ ಒಳ್ಳೆಯ ಕೆಲಸಗಳು ಆಗಲಿ. ಆ ಕೆಲಸಗಳ ಮೂಲಕ ಇನ್ನಷ್ಟು ಬೆಳೆಯಲಿ ಎಂದು ಆಶೀರ್ವದಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವಾಯ್.ಎನ್. ಗೌಡರ್, ಅಧ್ಯಕ್ಷತೆ ವಹಿಸಿದ್ದ ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರವಿ ಗುಂಜಿಕರ್, ವಕೀಲರಾದ ರುದ್ರಗೌಡ ಪಾಟೀಲ, ಪ್ರಮುಖರಾದ ತಿಮ್ಮರೆಡ್ಡಿ ಮರಡ್ಡಿ, ಮೋಹನ್ ಗುತ್ತೆಮ್ಮನವರ, ಅಮ್ಮ ಫೌಂಡೇಶನ್ ಮಾರ್ಗದರ್ಶಕ ಡಾ. ಬಸವರಾಜ್ ಬಳ್ಳಾರಿ ಮುಂತಾದವರು ಮಾತನಾಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕ ಎಚ್.ಎಮ್. ಶರೀಫನವರ್, ಪ್ರೇಮನಾಥ ಗರಗ, ರೋಟರಿ ಸಂಸ್ಥೆಯ ಅಧ್ಯಕ್ಷ ವಿಜಯ ಹಿರೇಮಠ, ಹುಚ್ಚಪ್ಪ ಸಂದಕದ, ಕೆ.ಎಫ್. ಹಳ್ಯಾಳ ಹಾಗೂ ಗ್ರಾಮಸ್ಥರು, ವಿದ್ಯಾರ್ಥಿಗಳು, ಮಹಿಳೆಯರು ಭಾಗವಹಿಸಿದ್ದರು.

ಫೌಂಡೇಶನ್‌ನ ನೂತನ ಅಧ್ಯಕ್ಷರಾಗಿ ವಕೀಲರಾದ ಮೈಲಾರಪ್ಪ ಡಿ.ಎಚ್, ಕಾರ್ಯದರ್ಶಿಯಾಗಿ ವಿಶ್ವನಾಥ ದಾಲಾಲಿ, ಖಜಾಂಚಿಯಾಗಿ ಮಾರುತಿ ಜಿ.ಎಚ್ ಪದಗ್ರಹಣ ಮಾಡಿದರು.

ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ದಲಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಂಸ್ಕೃತಿಕ ಕಾರ್ಯದರ್ಶಿ ಪರಶುರಾಮ್ ತಳವಾರ್ ಸ್ವಾಗತಿಸಿದರು. ಬಾಹುಬಲಿ ಜೈನ್ ಕಾರ್ಯಕ್ರಮ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!