HomeGadag Newsಪುರಾಣ ಪುಣ್ಯ ಕತೆಗಳಿಂದ ಸದ್ಭಾವನೆ ವೃದ್ಧಿ

ಪುರಾಣ ಪುಣ್ಯ ಕತೆಗಳಿಂದ ಸದ್ಭಾವನೆ ವೃದ್ಧಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮನುಷ್ಯ ಪರೋಪಕಾರಿಯಾಗಿರಬೇಕು, ಧರ್ಮವು ಅವನಲ್ಲಿರಬೇಕು. ಜಗವೆಲ್ಲ ನಗುತ್ತಿರಲಿ ಜಗದಳವು ನನಗಿರಲಿ ಎಂಬಂತೆ ಸಕಲರಿಗೆ ಲೇಸನ್ನು ಬಯಸುವ ಮನಸ್ಸು ನಮ್ಮದಾಗಿರಬೇಕು. ಪುರಾಣ ಪುಣ್ಯ ಕತೆಗಳು ಮನುಷ್ಯನಲ್ಲಿ ಧಾರ್ಮಿಕ ಭಾವನೆಯೊಂದಿಗೆ ವಿಚಾರ ಹಾಗೂ ವಿವೇಚನವನ್ನುಂಟುಮಾಡುತ್ತವೆ ಎಂದು ಅಣ್ಣಿಗೇರಿ ದಾಸೋಹಮಠದ ಪೂಜ್ಯ ಸದ್ಗುರು ಡಾ. ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.

ಅವರು ರವಿವಾರ ಗದುಗಿನ ರಾಜೀವ ಗಾಂಧಿ ನಗರದ ಈಶ್ವರ ಬಡಾವಣೆಯ ಶ್ರೀ ಈಶ್ವರ ಸಮುದಾಯ ಭವನ ಹಾಗೂ ಶ್ರೀ ಈಶ್ವರ ಸೇವಾ ಟ್ರಸ್ಟ್ ಉದ್ಘಾಟನಾ ಸಮಾರಂಭ ಮತ್ತು ಕೋಡಿಕೊಪ್ಪದ ಹಠಯೋಗಿ ಶ್ರೀ ವೀರಪ್ಪಜ್ಜನವರ ಜೀವನ ದರ್ಶನ ಪ್ರವಚನ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶ್ರಾವಣ ಮಾಸದ ಪ್ರಯುಕ್ತ 13ನೇ ವರ್ಷದ ಪುರಾಣದಲ್ಲಿ ಪ್ರವಚನಕಾರರಾದ ಮುಖ್ಯೋಪಾಧ್ಯಾಯ ಎಸ್.ಬಿ. ದೊಡ್ಡಣ್ಣವರ ಅವರಿಂದ ಸಾಗಿ ಬಂದ ಕೋಡಿಕೊಪ್ಪದ ಹಠಯೋಗಿ ಶ್ರೀ ವೀರಪ್ಪಜ್ಜನವರ ಜೀವನ ದರ್ಶನ ಪ್ರವಚನ ಮಹಾ ಮಂಗಲಗೊAಡಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗದಗ-ಬೆಟಗೇರಿ ನಗರಸಭೆಯ ವಿರೋಧ ಪಕ್ಷದ ನಾಯಕ ಎಲ್.ಡಿ. ಚಂದಾವರಿ ಮಾತನಾಡಿ, ಪುರಾಣವು ನಮ್ಮಲ್ಲಿ ಜಾಗೃತಿಯನ್ನುಂಟು ಮಾಡುತ್ತದೆ. ಈಶ್ವರ ಸೇವಾ ಟ್ರಸ್ಟ್‌ ನಿಂದ ಅಭಿವೃದ್ಧಿ ಕಾರ್ಯಗಳು ನಡೆಯಲಿ ಎಂದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರು ಹಾಗೂ ದಾನಿಗಳಾದ ಎನ್.ಎಂ. ಪಾಟೀಲ, ಬಸವರಾಜ ಮಾಲಗಿತ್ತಿ, ಶರಣಪ್ಪ ನವಲಗುಂದ, ಹುಚ್ಚಣ್ಣ ಶಹಪೂರ, ಸಿದ್ಧಲಿಂಗಪ್ಪ ಹಟ್ಟಿ, ಸಂಗಪ್ಪ ಹೊನ್ನಪ್ಪನವರ, ಯಮನಪ್ಪ ತಳವಾರ, ಬೂದಪ್ಪ ನರ್ತಿ, ಎಂ.ಎಂ ಕುಬಸದ, ಎಸ್.ಟಿ. ಗೌಡರ, ವ್ಹಿ.ಎಸ್. ಶಿವಸಿಂಪರ, ಜಿ.ಬಿ. ಬೆಳಹಾರ, ಗುರುಪುತ್ರಪ್ಪ ಶಿವಸಿಂಪಿ, ಕೆ.ಎಸ್. ಕೋರಿಮಠ, ರಾಜೇಸಾಬ ಇರಕಲ್ಲ, ಸುಭಾಸ ದೊಡ್ಡಮನಿ, ನೀಲಾಂಬಿಕೆ ತೋಟದ, ಭಾಗ್ಯಲಕ್ಷ್ಮೀ ಶಿರೋಳ, ಪ್ರಭಾವತಿ ಜುಕ್ತಿಮಠ, ಪ್ರೇಮಾ ದೇಶಪ್ಪನವರ, ಶಿವಗಂಗಾ ಶಿವನಗುತ್ತಿ, ರಾಜೇಶ್ವರಿ ಸಂತೋಜಿ, ರೇಣುಕಾ ಕಂಬಳಿ, ಸುವರ್ಣಾ ಮುದೇನಗುಡಿ, ಲೀಲಾವತಿ ಪಾಟೀಲ, ಸಂಪದಾ ಪಾಟೀಲ, ಸರಸ್ವತಿ ನಾಯರಿ, ಬಸವ್ವ ಕೋಳೋರ, ವಿಜಯಶ್ರೀ ಇಲಕಲ್ಲ, ಸುಮಾ ಸೋಮನಗೌಡ್ರ, ಲಕ್ಷ್ಮೀದೇವಿ ದಂಡಿನ, ಲಕ್ಷ್ಮೀ ಅಬ್ಬಿಗೇರಿ, ಜಯಸುಧಾ ನಾಯ್ಕರ್, ಶೋಭಾ ಅಂಗಡಿ, ಪುಷ್ಪಾ ಮಾಕಾಪೂರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯ ಮೇಲೆ ಟ್ರಸ್ಟ್ನ ಗೌರವ ಅಧ್ಯಕ್ಷ ಚನ್ನಬಸಪ್ಪ ಅಕ್ಕಿ, ಅಧ್ಯಕ್ಷ ಮಲ್ಲಿಕಾರ್ಜುನ ಸಂತೋಜಿ, ಕಾರ್ಯದರ್ಶಿ ಕುಬೇರಕುಮಾರ ಕಂಬಳಿ, ಖಜಾಂಚಿ ಶಿವಯೋಗಯ್ಯ ಹಿರೇಮಠ, ಉಪಾಧ್ಯಕ್ಷರಾದ ಸುವರ್ಣಾ ವಸ್ತ್ರದ, ಮಹಾದೇವಪ್ಪ ಕೋಳೋರ, ಚನ್ನಯ್ಯ ಹಿರೇಹಾಳಮಠ, ಎಂ.ಡಿ. ಮಾವಿನಕಾಯಿ, ಸಹ ಕಾರ್ಯದರ್ಶಿಗಳಾದ ಚನ್ನಮ್ಮ ಸಂಶಿ, ಗಿರೀಶ್ ಮಾವಿನಕಾಯಿ, ಸಹಖಜಾಂಚಿ ಪ್ರಕಾಶ ಮ್ಯಾಗೇರಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಿರ್ದೇಶಕ ಮಂಡಳಿಯ ಸದಸ್ಯರಾದ ರಾಮನಗೌಡ ಪಾಟೀಲ, ಸೋಮನಗೌಡ ಸೋಮನಗೌಡ್ರ, ಹನಮಂತಪ್ಪ ಚಿಗರಿ, ದೀಪ್ತಿ ಪಾಠಕ, ಸುಜಾತಾ ಗುಡಿಮನಿ, ವಿದ್ಯಾ ಹುಲಬನ್ನಿ, ಗಂಗವ್ವ ನರ್ತಿ, ಅನ್ನಪೂರ್ಣ ಅಡ್ನೂರ, ಮಂಜುನಾಥ ಮಾನೇದ, ಭೀಮಪ್ಪ ಮಾಲಗಿತ್ತಿ, ಶರಣಬಸಪ್ಪ ಹೊನ್ನಪ್ಪನವರ, ಶಿವಕುಮಾರ ಮುಧೋಳ, ಪ್ರವೀಣ ಶಿವಶಿಂಪಿಗೇರ, ವೀರೇಶ ಮಾಡಲಗೇರಿ, ಲೋಹಿತ ಗುಳಗಣ್ಣವರ, ಗಿರೀಶ್ ಇಟಗಿ ಉಪಸ್ಥಿತರಿದ್ದರು.

ಭಕ್ತಿ ಸೇವೆಯನ್ನು ನಿವೃತ್ತ ಪ್ರಾಚಾರ್ಯ ಎಸ್.ಆರ್. ಅಂಗಡಿ ವಹಿಸಿಕೊಂಡಿದ್ದರು. ರತ್ನಾ ಮಂಟೂರಮಠ, ಮೋಹನ ಮೇರವಾಡೆ, ಶಿವಶಂಕರ ದೊಡ್ಡಮನಿ ಅವರಿಂದ ಸಂಗೀತ ಜರುಗಿತು, ಶಿವಯೋಗಯ್ಯ ಹಿರೇಮಠ ಹಾಗೂ ಮಂಜುಳಾ ಅಕ್ಕಿ ನಿರೂಪಿಸಿ ವಂದಿಸಿದರು.

ಜ್ಞಾನಿಗಳ, ಅನುಭಾವಿಗಳ ಸಜ್ಜನರ ಸಂಘವು ನಮ್ಮಲ್ಲಿ ಜ್ಞಾನವನ್ನುಂಟುಮಾಡುತ್ತವೆ. ಮಂಗಲ ಎಂದರೆ ಶುಭವನ್ನುಂಟು ಮಾಡುವದು. ಪುರಾಣ ಮಂಗಲವು ಪುರಾಣವನ್ನು ಕೇಳಿ, ತಿಳಿದು ಅರ್ಥೈಸಿ ಮನವನ್ನು ನಿರ್ಮಲಗೊಳಿಸಿ ಜೀವನದಲ್ಲಿ ಶುಭವನ್ನು ತಂದುಕೊಳ್ಳುವದಾಗಿದೆ. ಪುರಾಣ ಪುಣ್ಯ ಕತೆಗಳು ಸದ್ಭಾವನೆಗಳನ್ನು ಉಂಟು ಮಾಡಿ ಮನಸ್ಸಿನಲ್ಲಿ ಭಕ್ತಿಯನ್ನು ಬೆಳೆಸುತ್ತವೆ ಎಂದು ಡಾ. ಶಿವಕುಮಾರ ಮಹಾಸ್ವಾಮಿಗಳು ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!