ಚಾಲಕನ ನಿಯಂತ್ರಣ ತಪ್ಪಿ ಹೊಲಕ್ಕೆ ನುಗ್ಗಿದ ಸರ್ಕಾರಿ ಬಸ್: ಪ್ರಯಾಣಿಕರು ಬಚಾವ್!

0
Spread the love

ಧಾರವಾಡ:- ತಾಲೂಕಿನ ಮರೇವಾಡ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ಸೊಂದು ಹೊಲಕ್ಕೆ ನುಗ್ಗಿದ ಘಟನೆ ಜರುಗಿದೆ. ಅದೃಷ್ಟವಶಾತ್ ಘಟನೆಯಿಂದ ಭಾರೀ ಅನಾಹುತ ತಪ್ಪಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Advertisement

ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಧಾರವಾಡದಿಂದ ಸವದತ್ತಿಗೆ ಈ ಬಸ್ ತೆರಳುತ್ತಿತ್ತು ಎನ್ನಲಾಗಿದೆ. ಇನ್ನೂ ಘಟನೆಯಿಂದ ಬಸ್ ನಲ್ಲಿದ್ದ 40 ಜನರು ಅದೃಷ್ಟವಶಾತ್ ಪಾರಾಗಿದ್ದು, ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.

ಧಾರವಾಡ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


Spread the love

LEAVE A REPLY

Please enter your comment!
Please enter your name here