ಸರ್ಕಾರಿ ನೌಕರರಿಗೆ ಕೇಂದ್ರದಿಂದ ಸಿಕ್ತು ಯುಗಾದಿ ಗಿಫ್ಟ್: ಶೇ.2 ರಷ್ಟು ಡಿಎ ಏರಿಕೆ!

0
Spread the love

ನವದೆಹಲಿ:- ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಯುಗಾದಿ ಹಬ್ಬದ ನಿಮಿತ್ತ ಗಿಫ್ಟ್​ವೊಂದನ್ನು ನೀಡಿದೆ. ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ತುಟ್ಟಿ ಭತ್ಯೆ ಹೆಚ್ಚಳದ ಘೋಷಣೆಗಾಗಿ ಕಾಯುತ್ತಿದ್ದರು. ಅದರಂತೆ ಇದೀಗ ಕೇಂದ್ರವು ಸರ್ಕಾರಿ ನೌಕರರಿಗೆ ಶೇಕಡಾ 2ರಷ್ಟು ಡಿಎ ಏರಿಕೆ ಮಾಡಿದೆ.

Advertisement

ಈ ಬಗ್ಗೆ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಮಾಡಲಾಗಿದ್ದು, ಶೇಕಡಾ 53 ರಿಂದ ಶೇ.55ಕ್ಕೆ ಡಿಎ ಏರಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರದ ನೌಕರರು, ಪಿಂಚಣಿದಾರರಿಗೆ ಏರಿಕೆಯ ಲಾಭ ಪಡೆಯಲಿದ್ದಾರೆ.

ಈ ಹಿಂದೆ, ಅಕ್ಟೋಬರ್ 2024ರಲ್ಲಿ ಡಿಎ ಹೆಚ್ಚಳವನ್ನು ಘೋಷಿಸಲಾಗಿತ್ತು. ಆ ಸಮಯದಲ್ಲಿ, ಕೇಂದ್ರ ಸರ್ಕಾರಿ ನೌಕರರಿಗೆ ಶೇ.3 ರಷ್ಟು ತುಟ್ಟಿ ಭತ್ಯೆಯನ್ನು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತು. ಅದಾದ ನಂತರ ಇದೀಗ ಒಟ್ಟು ತುಟ್ಟಿ ಭತ್ಯೆ ಶೇಕಡಾ 53 ರಿಂದ ಶೇ.55ಕ್ಕೆ ಏರಿಕೆ ಮಾಡಲಾಗಿದೆ.


Spread the love

LEAVE A REPLY

Please enter your comment!
Please enter your name here