ಬೆಂಗಳೂರು: ರಾಜ್ಯದಲ್ಲಿ ಉಂಟಾದ ಕಮರ್ಷಿಯಲ್ LPG ಕೊರತೆ ಹಿನ್ನೆಲೆ ಕರ್ನಾಟಕ ಸರ್ಕಾರ ಗ್ಯಾಸ್ ವಿತರಣೆಗೆ ಹೊಸ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ.
ನಾಳೆಯಿಂದಲೇ ಈ ಮಾರ್ಗಸೂಚಿಗಳು ಜಾರಿಗೆ ಬರಲಿದ್ದು, ಅಗತ್ಯ ವಲಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿಶೇಷವಾಗಿ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಶೇ.100 ಗ್ಯಾಸ್ ವಿತರಣೆ ಮಾಡಲು ಸೂಚಿಸಲಾಗಿದೆ.
ಇತರ ಪ್ರಮುಖ ವಲಯಗಳಾದ ಸೀಡ್ ಪ್ರೋಸೆಸಿಂಗ್, ಆಯಿಲ್ ಉತ್ಪಾದನಾ ಕಂಪನಿಗಳು, ಏರ್‌ಲೈನ್ಸ್ ಮತ್ತು ರೈಲ್ವೆಗಳಿಗೆ ಶೇ.70 ಗ್ಯಾಸ್ ನೀಡಲಾಗುತ್ತದೆ. ವೃದ್ಧಾಶ್ರಮಗಳಿಗೂ ಇದೇ ಪ್ರಮಾಣದಲ್ಲಿ ಪೂರೈಕೆ ಮಾಡಲು ಸೂಚಿಸಲಾಗಿದೆ.
ಆದರೆ, ಹೋಟೆಲ್‌ಗಳು, ಇಂಡಸ್ಟ್ರಿಯಲ್ ಕ್ಯಾಂಟೀನ್‌ಗಳು, ಕಾರ್ಪೋರೇಟ್ ಗೆಸ್ಟ್ ಹೌಸ್‌ಗಳು ಮತ್ತು ಫುಡ್ ಪ್ರೋಸೆಸಿಂಗ್ ಕಂಪನಿಗಳಿಗೆ ಕೇವಲ ಶೇ.10 ಗ್ಯಾಸ್ ವಿತರಣೆ ಮಾಡಲು ಸರ್ಕಾರ ನಿರ್ದೇಶನ ನೀಡಿದೆ. ಈ ಗೈಡ್‌ಲೈನ್ಸ್ ಅನುಸರಿಸಿ ಗ್ಯಾಸ್ ಏಜೆನ್ಸಿಗಳು ವಿತರಣೆ ಮಾಡಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.



