ಬೆಂಗಳೂರು: ಒಂದು ಕೋಮುವನ್ನು ಖುಷಿಪಡಿಸಲು ಸರ್ಕಾರ ಹಿಂದೂಗಳನ್ನ ಟಾರ್ಗೆಟ್ ಮಾಡುತ್ತಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
ನಾನು ಮದ್ದೂರಿಗೆ ಹೋಗಬೇಕು ಎಂಬ ಉತ್ಸುಕತೆ ಹೆಚ್ಚಾಗಿದೆ. ಇಂದು ಮದ್ದೂರಿಗೆ ಹೋಗುತ್ತೇನೆ. ರಾಜ್ಯದಲ್ಲಿ ಔರಂಗಜೇಬನ ಸರ್ಕಾರ ಇದೆ. ಸದ್ಯದಲ್ಲೇ ಪತನವಾಗಲಿದೆ ಎಂದರು. ಒಂದು ಕೋಮುವನ್ನು ಖುಷಿಪಡಿಸಲು ಹಿಂದೂಗಳನ್ನ ಟಾರ್ಗೆಟ್ ಮಾಡುತ್ತಿದೆ. ಇದು ಎಲ್ಲಿವರೆಗೆ ನಡೆಯುತ್ತದೆ ನೋಡೋಣ ಎಂದರು.
ಸಿಟಿ ರವಿ ವಿರುದ್ಧದ ಕೇಸ್‌ಗೆ ಪ್ರತಿಕ್ರಿಯಿಸಿದ ಯತ್ನಾಳ್ ಅವರು, ಸಿಟಿ ರವಿ ಅವರ ಮೇಲೆ ಹಾಕಿದ ಕೇಸ್‌ಗೆ ನಾವು ಹೆದರೋಲ್ಲ. ನನ್ನ ಮೇಲೆ 70 ಕೇಸ್ ದಾಖಲಾಗಿದೆ. ಇದಕ್ಕೆಲ್ಲ ನಾವು ಅಂಜುವುದಿಲ್ಲ ಎಂದರು. ಇದೇ ವೇಳೆ ಪ್ರದೀಪ್ ಈಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ್, ನಾವ ಮನುಷ್ಯರ ಹೇಳಿಕೆಗಳಿಗೆ ಮಾತ್ರ ಪ್ರತಿಕ್ರಿಯಿಸುತ್ತೇವೆ ಕಾಂಜಿಪಿಂಜಿಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.



