ಸರಕಾರದ ಮಾನದಂಡಗಳು ಉಲ್ಲಂಘನೆಯಾಗಬಾರದು: ಕೃಷ್ಣಪ್ಪ ಧರ್ಮರ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ಮೀಸಲು ಮತಕ್ಷೇತ್ರವಾಗಿದ್ದು, ವಿವಿಧ ಇಲಾಖೆಗಳಲ್ಲಿ ಕೈಗೊಳ್ಳಲಾಗುವ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ (ಎಸ್‌ಸಿಪಿ/ಟಿಎಸ್‌ಪಿ)ಯ ಕೆಲಸ ಮಾಡುವಾಗ ಸಮಿತಿ ಗಮನಕ್ಕೆ ತರುವುದು ಕಡ್ಡಾಯ ಹಾಗೂ ಇದಕ್ಕೆ ಸಂಬAಧಿಸಿದAತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯಿಂದ ದೃಢೀಕರಣವನ್ನು ಸಹ ಪಡೆಯಬೇಕೆಂದು ಶಿರಹಟ್ಟಿ ತಾ.ಪಂ ಇಓ ಎಸ್.ಎಸ್. ಕಲ್ಮನಿ ಹಾಗೂ ಲಕ್ಮೇಶ್ವರ ತಾ.ಪಂ ಕೃಷ್ಣಪ್ಪ ಧರ್ಮರ ಹೇಳಿದರು.

Advertisement

ಅವರು ಶುಕ್ರವಾರ ಶಿರಹಟ್ಟಿಯ ತಾ.ಪಂ ಸಭಾಭವನದಲ್ಲಿ ಜರುಗಿದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖಾವಾರು ಚರ್ಚೆಯ ಸಂದರ್ಭದಲ್ಲಿ ಎಲ್ಲ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಮುದಾಯದ ಏಳಿಗೆ ಸಮಿತಿಯ ಮೂಲ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಯಾವುದೇ ರೀತಿಯಲ್ಲಿ ಸರಕಾರದ ಮಾನದಂಡಗಳು ಉಲ್ಲಂಘನೆಯಾಗಬಾರದು. ಫಲಾನುಭವಿಗಳ ಆಯ್ಕೆ ಮಾಡುವಾಗ ಜಾಗರೂಕತೆಯಿಂದ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕೆಂದು ಹೇಳಿದರು.

ಕೆಆರ್‌ಐಡಿಎಲ್‌ನಿಂದ ಅರ್ಧಂಬರ್ಧ ಕೆಲಸವಾಗುತ್ತಿದೆ. ಈ ಬಗ್ಗೆ ಸಂಬAಧಿಸಿದ ಎಇಇಗೆ ಹೇಳಿದರೂ ಸಹ ಸರಿಯಾಗಿ ಸ್ಪಂದಿಸುತ್ತಿಲ್ಲ. ಎಷ್ಟು ಕೆಲಸಗಳು ನಡೆಯುತ್ತಿವೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಬೇಕು. ಮತ್ತು ಸುವರ್ಣಗಿರಿಯಲ್ಲಿ ಆದರ್ಶ ಗ್ರಾಮ ಯೋಜನೆಯಡಿ ಆದ ಕೆಲಸಗಳ ವೀಕ್ಷಣೆಗೆ ದಿನಾಂಕವನ್ನು ನಿಗದಿಪಡಿಸಬೇಕು. ಕೆಲಸಗಳಲ್ಲಿ ನ್ಯೂನತೆಗಳು ಕಂಡುಬAದಲ್ಲಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ಲಕ್ಮೇಶ್ವರ ತಾ.ಪಂ ಇಓ ಕೃಷ್ಣಪ್ಪ ಧರ್ಮರ ಕೆಆರ್‌ಐಡಿಎಲ್ ಸಿಬ್ಬಂದಿಗೆ ಹೇಳಿದರು.

ಶಿರಹಟ್ಟಿ- ಲಕ್ಮೇಶ್ವರ ತಾಲೂಕುಗಳಲ್ಲಿ ರೇಷ್ಮೆ ಬೆಳೆಗಾರರ ಸಂಖ್ಯೆ ಎಷ್ಟು,  ರೇಷ್ಮೆ ಕೃಷಿಗೆ ಉತ್ತೇಜಿಸುವ ಕಾರ್ಯಕ್ರಮಗಳನ್ನು ಎಲ್ಲಿ ನಡೆಸಿದ್ದೀರಿ ಎಂಬ ಬಗ್ಗೆ ಇಓ ಕೃಷ್ಣಪ್ಪ ಧರ್ಮರ ರೇಷ್ಮೆ ಅಧಿಕಾರಿಗಳಲ್ಲಿ ಮಾಹಿತಿಯನ್ನು ಕೇಳಿದರು. ಇದಕ್ಕೆ ಸಮರ್ಪಕ ಉತ್ತರ ಅಧಿಕಾರಿಯಿಂದ ಬರದೇ ಇದ್ದುದರಿಂದ ಮುಂದಿನ ಸಭೆಗೆ ಸಂಪೂರ್ಣ ಮಾಹಿತಿಯನ್ನು ತರಬೇಕು. ಹಾಗೂ ರೇಷ್ಮೆ ಕೃಷಿಯನ್ನು ಉತ್ತೇಜಿಸುವ ಸಲುವಾಗಿ ರೈತರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಸೂಚನೆ ನೀಡಿದರು.

ಶಿರಹಟ್ಟಿ- ಲಕ್ಮೇಶ್ವರ ತಾಲೂಕುಗಳಲ್ಲಿಯ ಎಸ್‌ಸಿ/ಎಸ್‌ಟಿ ಕಾಲೋನಿಗಳಲ್ಲಿ ಆರೋಗ್ಯ ಇಲಾಖೆ ವತಿಯಿಂದ ಸಮುದಾಯದ ಜನರ ಆರೋಗ್ಯದ ಸುಧಾರಣೆ ಸಲುವಾಗಿ ಅಲ್ಲಲ್ಲಿ ಕ್ಯಾಂಪ್‌ಗಳನ್ನು ನಡೆಸಬೇಕು. ಕಾಯಿಲೆಗಳನ್ನು ಗುರುತಿಸಿ ಅವರ ಆರೋಗ್ಯ ಸುಧಾರಣೆಗೆ ಆದ್ಯತೆ ನೀಡಬೇಕೆಂದು ಲಕ್ಮೇಶ್ವರ ತಾ.ಪಂ ಇಓ ಕೃಷ್ಣಪ್ಪ ಧರ್ಮರ ಹೇಳಿದರು. ಕೇಂದ್ರ ಸರಕಾರದಿಂದ ಬರುವ ಅನುದಾನದಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯದ ಜನತೆಗೆ ವಿನಿಯೋಗಿಸುತ್ತಿರುವ ಅನುದಾನದ ಸಂಪೂರ್ಣ ಮಾಹಿತಿಯನ್ನು ಮುಂದಿನ ಸಭೆಗೆ ಒದಗಿಸಬೇಕೆಂದು ಶಿರಹಟ್ಟಿ ತಾ.ಪಂ ಇಓ ಎಸ್.ಎಸ್. ಕಲ್ಮನಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಚನೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ ಗೋಪಾಲ ಲಮಾಣಿ, ಎಂ.ವಿ. ಸಂಕನೂರ, ಪಿಆರ್‌ಇಡಿ ಎಇಇ ಎಂ.ಪಿ. ರಾಠೋಡ, ಎಡಿಎ ರೇವಣೆಪ್ಪ ಮನಗೂಳಿ, ಅಕ್ಷರದಾಸೋಹ ಎಡಿ ಎಚ್.ಎಸ್. ರಾಮನಗೌಡ್ರ, ಪಿಡಬ್ಲ್ಯುಡಿ ಎಇಇ ತಿಮ್ಮಾಪೂರ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here