ಬೆಂಗಳೂರು:- ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ಬುದ್ಧಿಗೇಡಿ ಸರ್ಕಾರ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಬುದ್ಧಿಗೇಡಿ ಸರ್ಕಾರ. ಸಿದ್ದರಾಮಯ್ಯ ಸರ್ಕಾರ ಬರೀ ಸೈಟ್ ದರೋಡೆ ಮಾಡುವಂತಹ ಸರ್ಕಾರ ಅಲ್ಲ, ಬಡವರ ಬಿಪಿಎಲ್ ಕಾರ್ಡ್ ದರೋಡೆ ಮಾಡುವ ಸರ್ಕಾರ ಕೂಡ ಹೌದು. ಲಕ್ಷಾಂತರ ಬಡವರ ಬಿಪಿಎಲ್ ಕಾರ್ಡ್‌ಗಳನ್ನ ರದ್ದು ಮಾಡಿದ್ದಾರೆ, ಅವರ ಊಟದ ಕಥೆ ಏನು? ಅರ್ಹ ಬಿಪಿಎಲ್ ರದ್ದು ಮಾಡಲ್ಲ ಅಂದಿದ್ರು, ಈಗ ರದ್ದು ಮಾಡಿದ್ಯಾಕೆ? ಕೊಡ್ತೀವಿ ಅಂತಿರೋದ್ಯಾಕೆ? ಇದೇನು ವಾಪಸ್ ಸರ್ಕಾರನಾ? ಅಂತ ಪ್ರಶ್ನೆ ಮಾಡಿದ್ರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 89 ಕೋಟಿ ರೂ. ಹಗರಣ ಆಗಿರೋದನ್ನ ಸದನದಲ್ಲೇ ಒಪ್ಪಿಕೊಂಡಿದ್ದರು. ಯಾರಾದರೂ ಕಪಾಳಮೋಕ್ಷ ಮಾಡಿ ಹೇಳಿದರೆ ತಪ್ಪು ತಿದ್ದಿಕೊಂಡು ಹೋಗೋದು, ಇಲ್ಲವೇ ತಪ್ಪನ್ನೇ ಮುಂದೂಡಿಸಿಕೊಂಡು ಹೋಗೋದು ಈ ಸರ್ಕಾರದ ವರ್ತನೆ. ವಕ್ಫ್ ಬೋರ್ಡ್‌ನಿಂದ ನೋಟಿಸ್ ಕೊಟ್ರು ಈಗ ವಾಪಸ್ ತಗೋತಿದ್ದಾರೆ. ಇದೊಂದು ಬುದ್ಧಿಗೇಡಿ ಸರ್ಕಾರ ಎಂದು ಆಕ್ರೋಶ ಹೊರ ಹಾಕಿದ್ದಾರೆ.