ವಿಜಯಸಾಕ್ಷಿ ಸುದ್ದಿ, ಡಂಬಳ: ಪ್ರತಿ ಹಳ್ಳಿಗೂ ಅಭಿವೃದ್ಧಿಯ ಬೆಳಕು ತಲುಪಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರವು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಗ್ರಾಮೀಣ ಪ್ರದೇಶದ ಬಡಾವಣೆಗಳಲ್ಲಿ ಅಭಿವೃದ್ಧಿ, ಸುಧಾರಣೆಯ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಡಂಬಳ ಹೋಬಳಿಯ ಹಳ್ಳಿಗುಡಿ ಗ್ರಾಮದಲ್ಲಿ 45 ಲಕ್ಷ ರೂ ವೆಚ್ಚದ ಸಿ.ಸಿ. ರಸ್ತೆ, ಗ್ರಂಥಾಲಯ, ಹಳ್ಳಿಕೇರಿ ಗ್ರಾಮದ ಕವಲೂರ ರಸ್ತೆಯ ಹಳ್ಳ ದಾಟಲು 45 ಲಕ್ಷ ರೂ ವೆಚ್ಚದ ಸೇತುವೆ ನಿರ್ಮಾಣ, 18 ಲಕ್ಷ ರೂ ವೆಚ್ಚದ ಅಂಗನವಾಡಿ ಕಟ್ಟಡ ಭೂಮಿ ಪೂಜೆ ಹಾಗೂ 28 ಲಕ್ಷ ರೂ ವೆಚ್ಚದ ಅಗಸಿ ಬಾಗಿಲು ಕಟ್ಟಡದ ಭೂಮಿ ಪೂಜೆ, ಡಿ.ಎಸ್. ರಾಮೇನಹಳ್ಳಿ ಗ್ರಾಮದಲ್ಲಿ ಸಿ.ಸಿ. ರಸ್ತೆ ಕಾಮಗಾರಿಯ ಭೂಮಿ ಪೂಜೆ, ಕೃಷಿ ಇಲಾಖೆಯಿಂದ ಹಿಂಗಾರು ಹಂಗಾಮಿನ ಬೀಜ ವಿತರಣೆಗೆ ಚಾಲನೆ ನೀಡಿ ಅವರು ಮಾನ್ಯಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿ ಹೆಕ್ಟೇರ್‌ಗೆ 8 ಸಾವಿರ ರೂ ಗಿಂತ ಹೆಚ್ಚು ಪರಿಹಾರವನ್ನು ನೀಡುವುದಕ್ಕಾಗಿ ಯೋಜನೆಯನ್ನು ರೈತರಿಗಾಗಿ ಹಾಕಿಕೊಂಡಿದ್ದಾರೆ. ಪಂಚ ಗ್ಯಾರಂಟಿ ಮೂಲಕ 1 ಕೋಟಿಗೂ ಹೆಚ್ಚು ಕುಟುಂಬಗಳು ಆರ್ಥಿಕ ಪ್ರವಾಹಿನಿಗೆ ಬಂದಿವೆ. ಹಳ್ಳಿಕೇರಿ ಗ್ರಾಮದ ರೈತರು ಬೆಳೆಗಳನ್ನು ಕಟಾವು ಮಾಡಿ ತರಲು ಅಗತ್ಯವಿದ್ದ ಕವಲೂರ ಹಳ್ಳದ ಸೇತುವೆ ನಿರ್ಮಾಣಕ್ಕೆ 45 ಲಕ್ಷ ರೂ ವೆಚ್ಚದಲ್ಲಿ ಆದ್ಯತೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಂಡರಗಿ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ, ತಹಸೀಲ್ದಾರ ಯರಿಸ್ವಾಮಿ ಪಿ.ಎಸ್., ಇಒ ವಿಶ್ವನಾಥ ಹೊಸಮನಿ, ಗ್ರಾ.ಪಂ ಅಧ್ಯಕ್ಷೆ ಮರಿಯಮ್ಮ ಹಿರೇಮನಿ, ತಾ.ಪಂ ಮಾಜಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಗೋಣಿಬಸಪ್ಪ ಕೊರ್ಲಹಳ್ಳಿ, ಶಾಂತವೀರ ಚೆನ್ನಳ್ಳಿ, ಬಸವರಡ್ಡಿ ಬಂಡಿಹಾಳ, ಬಸುರಾಜ ಶಿರೂಳ, ಬಾಬು ಸರಕಾವಾಸ, ದೊಡ್ಡಬಸಪ್ಪ ಚೆನ್ನಳ್ಳಿ, ಗುರಣ್ಣ ಕುರ್ತಿಕೋಟಿ, ಗುತ್ತಿಗೆದಾರ ನಾಗರಾಜ ಸಜ್ಜನ, ಬೀರಪ್ಪ ಬೀರಣ್ಣನವರ, ಮಲ್ಲನಾಯ್ಕರ, ಯಲ್ಲಪ್ಪ ಬಚನಳ್ಳಿ, ಹನುಮಂತ ಆನಿ, ದೇವೇಂದ್ರ ಪೂಜಾರ, ಬಸಪ್ಪ ಮಲ್ಲನಾಯ್ಕರ, ಕುಬೇರಪ್ಪ ಕೊಳ್ಳಾರ, ಗವಿಸಿದ್ಧಯ್ಯ ಹಿರೇಮಠ, ನಿಂಗಪ್ಪ ತೊಂಡಿಹಾಳ, ವೀರಭದ್ರಪ್ಪ ಚುರ್ಚಿಹಾಳ, ಯಲ್ಲಪ್ಪ ವಣಕೇರಿ, ರಾಮಪ್ಪ ಬಿನ್ನಾಳ, ಮಾರುತಿ ಹೊಂಬಳ, ಪಿಆರ್‌ಡಿ ಅಭಿಯಂತರ ಚಂದ್ರಕಾಂತ ನಿರಲೇಕರ, ಪಿಡಬ್ಲ್ಯೂಡಿ ಅಭಿಯಂತರ ಬಸುರಾಜ, ಉಪತಹಸೀಲ್ದಾರ ಎಸ್.ಎಸ್. ಬಿಚ್ಚಾಲಿ, ಕೃಷಿ ನಿರ್ದೇಶಕ ಪ್ರಾಣೇಶ್, ಕೃಷಿ ಅಧಿಕಾರಿ ಎಸ್.ಬಿ. ರಾಮನಳ್ಳಿ, ಬಿಒ ಗಂಗಾಧರ ಅಣ್ಣಿಗೇರಿ, ಸಿಡಿಪಿಒ ಮಹಾದೇವ, ಪಿಡಿಒ ಲತಾ ಮಾನೆ, ಗ್ರಾ.ಪಂ ಸದಸ್ಯರು, ರೈತರು, ಗ್ರಾಮದ ಹಿರಿಯರು ಇದ್ದರು.
ಹಳ್ಳಿಕೇರಿ ಮಹಿಳೆಯರು ಗ್ಯಾರಂಟಿ ಹಣವನ್ನು ಉಳಿಸಿ, ಗ್ರಾಮದ ಪ್ರತಿ ಮಹಿಳೆಯರು 500 ರೂ ಸೇರಿಸಿ ಆರಾಧ್ಯ ದೇವತೆ ಕಾಳಮ್ಮ ದೇವಿಗೆ ಬೆಳ್ಳಿ ಕಿರೀಟ ನೀಡಿ ಭಕ್ತಿ ಸಮರ್ಪಿಸಿರುವುದು ಸಂತೋಷಕ್ಕೆ ಕಾರಣವಾಗಿದೆ. ರೈತರು ಬಿತ್ತನೆಗೆ ಕೃಷಿ ಇಲಾಖೆಯಿಂದ ಕೊಡುವ ಬೀಜಗಳನ್ನು ಪಡೆದುಕೊಳ್ಳುವುದರ ಮೂಲಕ ಇದರ ಸದ್ಬಳಕೆಯನ್ನು ಮಾಡಿಕೊಳ್ಳಿ. ಮುಂಬರುವ ಗ್ರಾ.ಪಂ, ತಾ.ಪಂ, ಜಿ.ಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಶಕ್ತಿ ನೀಡಲು ಮುಂದಾಗಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.