ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಸಾಧಕರಾಗಿ : ಜ್ಯೋತಿ ಕಿರಣ್ ದಾಸ್

0
Government School No. 12 declared as ``Happy School''
Spread the love

ವಿಜಯಸಾಕ್ಷಿ ಸುದ್ದಿ, ಗದಗ : ವಿದ್ಯಾರ್ಥಿಗಳು ತಮ್ಮ ಜೀವನವನ್ನು ಅಮೂಲ್ಯವಾಗಿಸಿಕೊಳ್ಳಲು ಉತ್ತಮ ಮಾರ್ಗದರ್ಶನದೊಂದಿಗೆ ಸಾಂಸ್ಕೃತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸುಂದರ ಶಿಲ್ಪಗಳಾಗಬೇಕೆಂದು ಡಿಸ್ಟ್ರಿಕ್ 317ರ ಚೇರಮನ್ ಜ್ಯೋತಿ ಕಿರಣ್ ದಾಸ್ ಹೇಳಿದರು.
ಅವರು ಶುಕ್ರವಾರ ಇನ್ನರ್‌ವ್ಹಿಲ್ ಕ್ಲಬ್ ಗದಗ-ಬೆಟಗೇರಿ ಇವರು ದತ್ತು ಪಡೆದ ಗದುಗಿನ ಸರ್ಕಾರಿ ಶಾಲೆ ನಂ.12ನ್ನು `ಹ್ಯಾಪಿ ಸ್ಕೂಲ್’ ಎಂದು ಘೋಷಿಸಿ ಮಾತನಾಡಿದರು.
ಸರ್ಕಾರಿ ಶಾಲೆ ಮಕ್ಕಳ ಸುಮಧುರ ಕನಸುಗಳಿಗೆ ಇನ್ನರ್‌ವ್ಹೀಲ್ ಕ್ಲಬ್ ರೆಕ್ಕೆಯಾಗುತ್ತದೆ. ಕಲಿಕೆಯಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಕ್ಕಳು ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕೆಂದರು.
ಡಿಸ್ಟ್ರಿಕ್ ಸಿಎಲ್‌ಸಿಸಿ ಪಿಡಿಸಿ ನಂದಾ ಜಾಡಬುಕೆ ಮಾತನಾಡಿ, ಮಕ್ಕಳ ಬದುಕು ಅರಳುವ ಹೂವಿನಂತೆ. ನಾವೆಲ್ಲರೂ ಪ್ರೀತಿ-ವಾತ್ಸಲ್ಯ-ಪ್ರೋತ್ಸಾಹದ ನೀರೆರೆದು ಅವುಗಳಿಗೆ ಪ್ರೋತ್ಸಾಹಿಸಿದರೆ ಮುಂದೆ ಅರಳಿ ನಿಂತ ಹೂವಾಗಿ ಎಲ್ಲರ ಗಮನ ಸೆಳೆಯುತ್ತಾರೆ ಎಂದರು.
ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಲಾ ತಾಪಸ್ಕರ್ ಮಾತನಾಡಿ, ವಿದ್ಯಾರ್ಥಿ ಬದುಕಿನ ಸುಂದರ ಕ್ಷಣಗಳು ರೂಪಗೊಳ್ಳಲು ನಾವೆಲ್ಲರೂ ಸಹಾಯ-ಸಹಕಾರಕ್ಕೆ ಮುಂದಾಗಬೇಕು. ಇನ್ನರ್‌ವ್ಹೀಲ್ ಕ್ಲಬ್ ಸಾವಿರಾರೂ ರೂಪಾಯಿ ಬೆಲೆಯ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಅವರಲ್ಲಿ ಉತ್ತೇಜನ ತುಂಬಿದೆ ಎಂದರು.
ಪಿಡಿಸಿ ಪ್ರೇಮಾ ಗುಳಗೌಡ್ರ ಮಾತನಾಡಿ, ಶಿಕ್ಷಣವೇ ಶಕ್ತಿ. ವಿದ್ಯಾರ್ಥಿಗಳು ಕಲಿಯುವ ಪ್ರಕ್ರಿಯೆಯಲ್ಲಿ ನಿಷ್ಠೆಯಿಂದ ಕಲಿತು ತಂದೆ-ತಾಯಿ, ಕಲಿತ ಶಾಲೆ ಹಾಗೂ ಪ್ರೋತ್ಸಾಹ ನೀಡಿದವರು ಹೆಮ್ಮೆ ಪಡುವಂತೆ ಸಾಧಿಸಬೇಕು ಎಂದರು.
ಕ್ಲಬ್ ಕಾರ್ಯದರ್ಶಿ ವೀಣಾ ತಿರ್ಲಾಪೂರ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಸ್ಥೆಯು ಈ ವರ್ಷ ಗದಗ ಶಹರದ 4 ಹಾಗೂ ಗ್ರಾಮೀಣ ಭಾಗದ 1 ಶಾಲೆಯನ್ನು ದತ್ತು ಪಡೆದು ಅಗತ್ಯಕ್ಕೆ ಅನುಸಾರವಾಗಿ ಓದು-ಬರಹದ ಜೊತೆಗೆ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಶಾಲಾ ಭೌತಿಕ ಅವಶ್ಯಕತೆಗಳಿಗೆ ಸ್ಪಂದಿಸಿ ಇಂದು `ಹ್ಯಾಪಿ ಸ್ಕೂಲ್’ ಘೋಷಣೆ ಮಾಡಲಾಗಿದೆ ಎಂದರು.
ಕ್ಲಬ್‌ನ ಸಿಎಲ್‌ಸಿಸಿ ಸುಮಾ ಪಾಟೀಲ ಮಾತನಾಡಿ, ಸರ್ಕಾರಿ ಶಾಲೆಗಳ ಸಬಲೀಕರಣವೇ ನಮ್ಮ ಧ್ಯೇಯವಾಗಿದ್ದು, ಅದಕ್ಕಾಗಿ ಅವುಗಳನ್ನು ದತ್ತು ಪಡೆದು ಕ್ಲಬ್‌ನ ಸದಸ್ಯರ ಸಹಾಯ-ಸಹಕಾರದಿಂದ ಅವಶ್ಯಕತೆಗಳನ್ನು ಪೂರೈಸಲಾಗಿದೆ ಎಂದರು.
ಶಾಲಾ ಮುಖ್ಯೋಪಾಧ್ಯಾಯ ಹೆಚ್.ಆರ್. ಕೋಣಿಮನಿ ಮಾತನಾಡಿ, ಸಂಘ-ಸಂಸ್ಥೆಗಳ ಸಹಾಯ ಸರ್ಕಾರಿ ಶಾಲೆಗಳಿಗೆ ಪುಷ್ಠಿ ನೀಡುತ್ತಿದ್ದು, ಮಕ್ಕಳ ಕಲಿಕೆಗೆ ಇದು ಸಹಕಾರಿಯಾಗಿದೆ ಎಂದರು.
ಕ್ಲಬ್‌ನ ಐಎಸ್‌ಓ ಪುಷ್ಪಾ ಬಂಡಾರಿ ಸ್ವಾಗತಿಸಿದರು. ಕೋ-ಸಿಸಿಎಲ್ ಮೀನಾಕ್ಷಿ ಕೊರವನವರ ಪರಿಚಯಿಸಿದರು. ಪಾಸ್ಟ್ ಪ್ರೆಸಿಡೆಂಟ್ ಸುವರ್ಣಾ ವಸ್ತçದ ನಿರೂಪಿಸಿದರು. ಮಂಜುನಾಥ ಹುಯಿಲಗೋಳ ವಂದಿಸಿದರು.
ಕಾರ್ಯಕ್ರಮದಲ್ಲಿ ಐ.ಹೆಚ್. ಬಳಬಟ್ಟಿ, ಎಸ್.ಬಿ. ಮುಳಗುಂದ, ಎಸ್.ಬಿ. ದೊಡ್ಡಮನಿ, ಎಸ್.ಬಿ. ಕನಿಕೆ, ಚಾಮರಾಜ ಹುಡೇದ, ಎಂ.ಕೆ. ಹುಯಿಲಗೋಳ, ಎಸ್.ಯು. ವಕ್ಕಳದ, ವಿ.ಜಿ. ಪಾಟೀಲ, ಎಸ್.ಟಿ. ಲಮಾಣಿ, ಎ.ಎಮ್. ಕೆಂಚರೆಡ್ಡಿಯವರ ಮುಂತಾದವರು ಉಪಸ್ಥಿತರಿದ್ದರು.
ಇನ್ನರ್‌ವ್ಹಿಲ್ ಕ್ಲಬ್ ಗದಗ-ಬೆಟಗೇರಿ ಅಧ್ಯಕ್ಷೆ ನಾಗರತ್ನಾ ಮಾರನಬಸರಿ ಮಾತನಾಡಿ, ಶಿಕ್ಷಣವು ಎಲ್ಲರಿಗೂ ಅತ್ಯವಶ್ಯಕ. ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಲು ಮುಖ್ಯವಾಗಿ ಶಿಕ್ಷಣ ಬೇಕು. ಪ್ರಾಥಮಿಕ ಹಂತವು ವಿದ್ಯಾರ್ಥಿಗಳ ಬದುಕಿನ ಮಹತ್ತರ ಘಟ್ಟ. ಹೀಗಾಗಿ ಈ ಮಕ್ಕಳ ಶಿಕ್ಷಣಕ್ಕೆ ಪ್ರೇರಣೆ ಅವಶ್ಯ ಎಂದರು.

Spread the love
Advertisement

LEAVE A REPLY

Please enter your comment!
Please enter your name here