ವಿಜಯಸಾಕ್ಷಿ ಸುದ್ದಿ, ಗದಗ: ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಶಿಕ್ಷಕರು ಇರುತ್ತಾರೆ. ಆದ್ದರಿಂದ ಸರ್ಕಾರಿ ಶಾಲೆಗಳು ಸದೃಢ ಸಮಾಜದ ಅಡಿಪಾಯವಾಗಿವೆ ಎಂದು ಬಾಗಲಕೋಟೆಯ ಡಿಸ್ಟ್ರಿಕ್ಟ್ ಎಡಿಟರ್ ಗೀತಾ ಗಿರಿಜಾ ಹೇಳಿದರು.
ಇನ್ನರ್‌ವ್ಹೀಲ್ ಕ್ಲಬ್ ಗದಗ-ಬೆಟಗೇರಿಯಿಂದ ದತ್ತು ಪಡೆದ ಎಚ್‌ಪಿಕೆಜಿಎಸ್ ಶಾಲೆ ನಂ.2 ರ ವೀಕ್ಷಣೆ ಮತ್ತು ಹ್ಯಾಪಿ ಸ್ಕೂಲ್ ಘೋಷಣೆಗೆ ಆಗಮಿಸಿದ ಅವರು, ಸರ್ಕಾರದಿಂದ ಅನೇಕ ಸವಲತ್ತುಗಳನ್ನು ಪಡೆದು ಸಮರ್ಥ ಶಿಕ್ಷಕರಿಂದ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳು ತಮ್ಮ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಕ್ಲಬ್‌ನ ಹಿರಿಯ ಸದಸ್ಯರಾದ ಸುಶೀಲಾ ಕೋಟಿ, ಶಾಲೆಯ ವಾತಾವರಣ, ಮಕ್ಕಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಹಾಗೂ ಶಾಲೆ ಹಾಗೂ ಇನ್ನರ್‌ವ್ಹೀಲ್ ಕ್ಲಬ್‌ನ ನಡುವಿನ ಒಡನಾಟದ ಬಗ್ಗೆ ವಿವರಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ದಲಬಂಜನ ಗುರುಗಳು ಮಾತನಾಡಿ, ಇನ್ನರ್‌ವ್ಹೀಲ್ ಕ್ಲಬ್‌ನಿಂದ ತಮ್ಮ ಶಾಲೆಗೆ ಆದ ಅನುಕೂಲಗಳು ಹಾಗೂ ದೊರೆತ ಸೌಲಭ್ಯಗಳಿಗೆ ಧನ್ಯವಾದ ತಿಳಿಸಿದರು.
ಸಿಪಿಸಿಸಿ ಮೀನಾಕ್ಷಿ ಕೊರವನವರ ಅವರು ದಿಶಾ ಐಐಎಲ್‌ಎಂ ಅಡಿಯಲ್ಲಿ 2ನೇ ಹ್ಯಾಪಿ ಸ್ಕೂಲ್ ಆಗಿ ಮಾಡಲು ಕೈಗೊಂಡ ಕಾರ್ಯಗಳನ್ನು ವಿವರಿಸಿದರು. ಕಾರ್ಯದರ್ಶಿ ಶಿವಲೀಲಾ ಅಕ್ಕಿ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಕ್ಲಬ್‌ನ ಮಾಜಿ ಅಧ್ಯಕ್ಷರುಗಳಾದ ಶಾಂತಾ ನಿಂಬಣ್ಣವರ, ಸರೋಜಾ ಆಲೂರ, ಅನ್ನಪೂರ್ಣಾ ವರವಿ, ಸದಸ್ಯರಾದ ಜಯಶ್ರೀ ಉಗಲಾಟ, ಶಾರದಾ ಸಜ್ಜನರ, ಸಂಧ್ಯಾ ಕೋಟ್ತಿ, ಪುಷ್ಪಾ ಭಂಡಾರಿ, ಪೂಜಾ ಭೂಮಾ, ವೀಣಾ ಕಾವೇರಿ, ಶಿಲ್ಪಾ ಅಕ್ಕಿ, ದೀಪಾ ಪಟ್ಟಣಶೆಟ್ಟಿ, ವಿಜಯಲಕ್ಷ್ಮಿ ಮಾನ್ವಿ, ಸಾಗರಿಕಾ ಅಕ್ಕಿ ಹಾಗೂ ಬಾಗಲಕೋಟೆಯ ಪಾಸ್ಟ್ ಎಡಿಟರ್ ಪೂರ್ಣಿಮಾ ಉಪಸ್ಥಿತರಿದ್ದರು.
ಅಧ್ಯಕ್ಷರಾದ ಅಶ್ವಿನಿ ಜಗತಾಪ್ ಮಾತನಾಡಿ, “ವಿದ್ಯಾರ್ಥಿನಿಯರ ಕ್ಷೇಮಾಭಿವೃದ್ಧಿ ಉದ್ದೇಶದಿಂದ ಹೆಣ್ಣು ಮಕ್ಕಳ ಶಾಲೆಯನ್ನು ದತ್ತು ಪಡೆದು, ಮೂಲಭೂತ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಕ್ಲಬ್‌ನಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ದುರಸ್ತಿ ಹಾಗೂ ಇತರ ಅವಶ್ಯಕ ಕಾರ್ಯಗಳನ್ನು ಕೈಗೊಂಡಿದ್ದೇವೆ” ಎಂದು ಹೇಳಿದರು.



