ಸರಕಾರಿ ಶಾಲೆಗಳು ಸಬಲೀಕರಣಗೊಳ್ಳಲಿ : ಆರ್.ಎಸ್. ಬುರಡಿ

0
beo
Spread the love

ವಿಜಯಸಾಕ್ಷಿ ಸುದ್ದಿ, ಗದಗ : `2024-25ನೇ ಸಾಲಿಗಾಗಿ ಶೈಕ್ಷಣಿಕ ಮುನ್ನೋಟ’ ಎಂಬ ಶೈಕ್ಷಣಿಕ ಚಟುವಟಿಕೆಗಳ ಕುರಿತು ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಇರುವ ಅವಕಾಶಗಳನ್ನು, ಆದ್ಯತೆಗಳ ಮೇರೆಗೆ ಬಳಸಿಕೊಂಡು ಸರಕಾರಿ ಪ್ರಾಥಮಿಕ ಶಾಲೆಗಳನ್ನು ಸರ್ವ ರೀತಿಯಿಂದಲೂ ಉನ್ನತೀಕರಿಸಲು ಮುಖ್ಯೋಪಾಧ್ಯಾಯರ ಕಾರ್ಯಾಗಾರವನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರ ಶಹರ ವಲಯದಲ್ಲಿ ಆಯೋಜಿಸಲಾಗಿತ್ತು.

Advertisement

ಕಾರ್ಯಾಗಾರ ಉದ್ಘಾಟಿಸಿದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ್ ಪ್ರಾಥಮಿಕ ಶಾಲೆಗಳನ್ನು ಸಬಲೀಕರಣಗೊಳಿಸಲು ಇರುವ ಅವಕಾಶಗಳ ಕುರಿತು ಮುಕ್ತವಾಗಿ ಅಭಿಪ್ರಾಯ ಸಂಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಮುಖ್ಯೋಪಾಧ್ಯಾಯರು, ಸರಾಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಪ್ರಯತ್ನವಾಗಬೇಕು. ಮಕ್ಕಳ ಹಾಜರಾತಿ, ಪ್ರತಿ ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಾಣ, ಮಗು ಕೇಂದ್ರಿತ ಬೋಧನೆ ಹಾಗೂ ನಾವೀನ್ಯಯುತ ಚಟುವಟಿಕೆಗಳ ಮೂಲಕ ಇನ್ನಷ್ಟು ಪರಿಣಾಮಕಾರಿಯಾಗಿರುವ ಕಲಿಕಾ ವಾತಾವರಣದಲ್ಲಿ ಪ್ರತಿ ಮಗುವಿನ ಕೃತಿ ಸಂಪುಟವನ್ನು ನಿಖರವಾದ ದಾಖಲೆಗಳೊಂದಿಗೆ ನಿರ್ವಹಿಸುವುದು, ಕನ್ನಡ ಸೇರಿದಂತೆ ಇಂಗ್ಲಿಷ್ ಭಾಷಾ ಕಲಿಕೆಯನ್ನು ವ್ಯವಸ್ಥಿತಗೊಳಿಸಿ ವರ್ಗಕೋಣೆಯಲ್ಲಿ ತಂತ್ರಜ್ಞಾನದೊಂದಿಗೆ ಲಭ್ಯವಿರುವ ವಿವಿಧ ಬೋಧನಾ ಕಲಿಕೋಪಕರಣಗಳನ್ನು ಸಮಯೋಚಿತವಾಗಿ ಬಳಸಿಕೊಂಡು, ಸಮುದಾಯ ಹಾಗೂ ಇಲಾಖೆಯ ಬೆಂಬಲದೊಂದಿಗೆ ಶಿಕ್ಷಕರೆಲ್ಲರೂ ತಂಡವಾಗಿ ಕಾರ್ಯ ನಿರ್ವಸುವ ಮೂಲಕ ಸರಕಾರಿ ಶಾಲೆಗಳನ್ನು ಮತ್ತಷ್ಟು ಸಬಲೀಕರಗೊಳಿಸಬಹುದು ಎಂದು ಅಭಿಪ್ರಾಯ ತಿಳಿಸಿದರು. ಈ ಅಂಶಗಳ ಕುರಿತು ಉಪನಿರ್ದೇಶಕರು ಎಲ್ಲಾ ಮುಖ್ಯೋಪಾಧ್ಯಾಯರಿಗೆ ಮಾರ್ಗದರ್ಶನ ಮಾಡಿದರು.

ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದ ಗದಗ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿ, ಈಗಾಗಲೇ ವಲಯದಲ್ಲಿ ಕೈಗೊಂಡ ಭೌತಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ಪ್ರಯತ್ನದೊಂದಿಗೆ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಸುಧಾರಣೆಗಳ ಕುರಿತು ಮುನ್ನೋಟ 2024-25ರ ಕಾರ್ಯಸೂಚಿಯನ್ನು ಮಂಡಿಸಿದರು. ಪ್ರತಿ ಶಾಲಾ ಹಂತದಲ್ಲಿ ಶಿಕ್ಷಕರು ಇದುವರೆಗಿನ ಪ್ರಯತ್ನಗಳ ಜೊತೆಗೆ ಶಾಲೆಯೊಳಗಿನ ಹಾಗೂ ಹೊರಗಿನ ಕಲಿಕಾ ವಾತವರಣ ಪರಿಣಾಮಕಾರಿಯಾದ, ಪೂರ್ವಸಿದ್ಧತೆಯಿಂದ ಕೂಡಿದ ನವೀನ ಚಟುವಟಿಕೆಯುಳ್ಳ ಕಲಿಕಾ ಪ್ರಯತ್ನಗಳಿಂದ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದೊಂದಿಗೆ ಸಮುದಾಯದ ಸಹಭಾಗಿತ್ವ ಹಾಗೂ ಇಲಾಖೆಯ ಶೈಕ್ಷಣಿಕ ಬೆಂಬಲ ವ್ಯವಸ್ಥೆಯ ಪೂರ್ಣ ಸಹಕಾರ ಪಡೆದು ಹಂತ ಹಂತವಾಗಿ ಸರಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಬಹುದಾಗಿದ್ದು, ಇಂತಹ ಶಕ್ತಿ ಹಾಗೂ ಸಾಮರ್ಥ್ಯ ನಿಮ್ಮೇಲ್ಲರಲ್ಲಿದೆ ಎಂಬ ಆಶಾಭಾವದೊಂದಿಗೆ ದಾಪುಗಾಲನ್ನು ಇಡೋಣ ಎಂದು ಪ್ರೇರೇಪಿಸಿದರು.

ಕಾರ್ಯಾಗಾರದಲ್ಲಿ ಉಪ ಯೋಜನಾ ಸಮನ್ವಯಾಧಿಕಾರಿ ಎಂ.ಎಚ್. ಕಂಬಳಿ, ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಎ. ಫಾರೂಖಿ, ಶಹರ ವಲಯದ ಎಲ್ಲ ಸಿ.ಆರ್.ಪಿ, ಬಿ.ಆರ್.ಪಿ, ಇ.ಸಿ.ಓ, ಬಿ.ಐ.ಇ.ಆರ್.ಟಿ, ಪಿ.ಇ.ಓ ಉಪಸ್ಥಿತರಿದ್ದರು.

ಗದಗ ಶಹರ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಕೆ. ಮಂಗಳಗುಡ್ಡ, ಉಪಾಧ್ಯಕ್ಷೆ ಆರ್.ಬಿ. ಸಂಕಣ್ಣವರ ಸಂಯುಕ್ತವಾಗಿ ಎಲ್ಲಾ ಮುಖ್ಯ ಶಿಕ್ಷಕರಿಗೆ ಒಂದು ದಿನಚರಿ ಪುಸ್ತಕ ನೀಡುವುದರ ಜೊತೆಗೆ ಇಲಾಖೆ ಹಾಗೂ ಶಿಕ್ಷಕರ ಸಂಘದ ನಡುವೆ ಶೈಕ್ಷಣಿಕ ಸಮನ್ವಯತೆ ಸದಾಕಾಲ ಇರುತ್ತದೆಂದರು.


Spread the love

LEAVE A REPLY

Please enter your comment!
Please enter your name here